ಧಾರವಾಡ 22: ಚುನಾವಣೆಗೆ ಸ್ಪಧರ್ಿಸುವ ಅಭ್ಯಥರ್ಿಗಳು ಮತ್ತು ಪಕ್ಷಗಳು ವಿವಿಧ ಪ್ರಕಾರದ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸುತ್ತಾರೆ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ಯ ರಚಿಸಿರುವ ಮಾಧ್ಯಮ ಪ್ರಮಾಣಿಕರಣ ಹಾಗೂ ಉಸ್ತುವಾರಿ ಸಮಿತಿ ಸಭೆ ಜರುಗಿತು.
ಆದ್ದರಿಂದ, ಸಮಿತಿಯಿಂದ ದಿನದ 24 ಗಂಟೆಯೂ ಮಾಧ್ಯಮಗಳ ವೀಕ್ಷಣೆ ಆಗಬೇಕು. ಅದಕ್ಕಾಗಿ ಪ್ರತ್ಯೇಕವಾದ ಮಾಧ್ಯಮ ಕೇಂದ್ರ ಹಾಗೂ ಸಿಬ್ಬಂದಿಗಳ ನಿಯೋಜನೆ ಮಾಡಲಾಗುತ್ತದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದ ತಕ್ಷಣ ಸಮಿತಿಯು ಮಾದರಿ ನೀತಿ ಸಂಹಿತೆಯ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿರುವ ಎಲ್ಲ ಮಾಧ್ಯಮಪ್ರತಿನಿಧಿಗಳಿಗೆ ಸಧ್ಯದಲ್ಲಿ ಒಂದು ದಿನದ ಕಾಯರ್ಾಗಾರ ಆಯೋಜಿಸಿ ಚುನಾವಣೆ ಪ್ರಕ್ರಿಯೆ, ಮಾದರಿ ನೀತಿ ಸಂಹಿತೆ, ಪಕ್ಷ, ಅಭ್ಯಥರ್ಿಗಳು ಪಾಲಿಸಬೇಕಾದ ನಿಯಮ, ಮುದ್ರಣಾಲಯಗಳ ಜವಾಬ್ದಾರಿ, ಪೇಡ್ ನ್ಯೂಸ್ ಮತ್ತು ಪ್ರಚಾರಕ್ಕೆ ಅನ್ವಯಿಸುವ ಇತರ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಮಾತನಾಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿ ಜವಾಬ್ದಾರಿ ಮುಖ್ಯವಾಗಿದೆ. ಸಮಿತಿ ಸದಸ್ಯರು ಪ್ರತಿಯೊಂದು ಪ್ರಕಟಣೆ ಮತ್ತು ದೃಶ್ಯಮಾಧ್ಯಮ ಪ್ರಸಾರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಕಂಡುಬಂದ ತಕ್ಷಣ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸುರೇಶ ಇಟ್ಕಾಳ ಅವರು ಮಾತನಾಡಿ ಅಭ್ಯಥರ್ಿಗಳು ಸಲ್ಲಿಸುವ ಮಾಹಿತಿಯನ್ನು ಪರಿಶೀಲಿಸಿ, ಪ್ರಮಾಣೀಕರಿಸಲಾಗುವುದು. ಮಾಧ್ಯಮ ಪ್ರಮಾಣೀಕರಣ ಪತ್ರ ನೀಡದ ವಿಷಯಗಳನ್ನು ಮುದ್ರಿಸಿದರೆ ಪಿ.ಆರ್.ಟಿ ಕಾಯ್ದೆ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಮಟ್ಟದ ಮಾಧ್ಯಮ ಉಸ್ತುವಾರಿ ಘಟಕದ ಸದಸ್ಯರಾದ ಕೆ.ವಾಯ್. ಜಯಂತಿ, ಎ.ಎ. ಖಾಜಿ, ಡಾ.ಎಸ್.ಎಂ. ಹಿರೇಮಠ, ಮಲ್ಲಿಕಾಜರ್ುನ ಭಜಂತ್ರಿ ಸೇರಿದಂತೆ ಚುನಾವಣಾ ವಿಭಾಗದ ತಹಶೀಲ್ದಾರ, ಸಿಬ್ಬಂದಿಗಳು ಹಾಗೂ ಇತರರು ಭಾಗವಹಿಸಿದ್ದರು.