ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮಾಯಾಂಕ್ ಅಗರ್ ವಾಲ್

 ವಿಶಾಖಪಟ್ಟಣ, ಅ.3 :  ಕರ್ನಾಟಕ ತಂಡದ ಸ್ಟಾರ್ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ ವಾಲ್ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.  ರಣಜಿ ಟ್ರೋಫಿಯಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮಾಯಾಂಕ್, ಟೆಸ್ಟ್ನಲ್ಲಿ ಆಡುವ ಅವಕಾಶ ಪಡೆದರು. ತಂಡಕ್ಕೆ ಆಯ್ಕೆಯಾದ ಮೊದಲ ಸರಣಿಯಲ್ಲಿ ಆಡುವ ಅವಕಾಶ ಪಡೆಯುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿ ಕೊಂಡರು. ಕಾಂಗರೂ ನಾಡಿನಲ್ಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ಕನ್ನಡಿಗ ಮಾಯಾಂಕ್ ಶತಕ್ ಬಾರಿಸುವಲ್ಲಿ ವಿಫಲರಾಗಿದ್ದರು.  ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದಿರುವ ಮಾಯಾಂಕ್, ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟಿಂಗ್ ಮಾಡಿದರು. ಲೆಗ್ ಸೈಡ್ ಹಾಗೂ ಆನ್ ಸೈಡ್ ಗಳಲ್ಲಿ ರನ್ ಕಲೆ ಹಾಕಿದ ಮಾಯಾಂಕ್ ಅಬ್ಬರಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಕೇಶವ್ ಮಹಾರಾಜ ಎಸೆದ 68.2ನೇ ಓವರ್ ನಲ್ಲಿ ಒಂದು ರನ್ ಪಡೆದು ಮೂರಂಕಿ ಮುಟ್ಟಿ ಸಾಧನೆ ಮಾಡಿದರು. ಇದು ಮಾಯಾಂಕ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕವಾಗಿದೆ.