ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ, ಶಾಸಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ
Anganwadi workers demand fulfillment of their demands, appeal to the Chief Minister through MLAs
ಲೋಕದರ್ಶನ ವರದಿ
ಯಲಬುರ್ಗಾ 15: ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿಯಿಂದ ಶಾಸಕರ ಕಚೇರಿಯಲ್ಲಿ ಆಪ್ತ ಸಹಾಯಕರ ಮುಖಾಂತರ ಮನವಿ ಸಲ್ಲಿಸಿ ಅವರು ಮಾತನಾಡಿದರು. ಅಧ್ಯಕ್ಷೆ ಲಲೀತಾ ಅರಳಿ ಮಾತನಾಡಿ, ’ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಆರಂಭವಾಗಿ 50 ವರ್ಷಗಳು ಪೂರ್ಣಗೊಂಡಿದ್ದು, ಮಕ್ಕಳ ಪಾಲನೆ-ಪೋಷಣೆ ಹಾಗೂ ಪೂರ್ವ ಶಿಕ್ಷಣದಂತಹ ಸಂವಿಧಾನಬದ್ಧ ಕರ್ತವ್ಯಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿರ್ವಹಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಹಾಗೂ ಗುಜರಾತ್ ಹೈಕೋರ್ಟ್ ಆದೇಶದಂತೆ ಅಂಗನವಾಡಿ ನೌಕರರನ್ನು 3 ಮತ್ತು 4ನೇ ಗ್ರೇಡ್ ಸರ್ಕಾರಿ ನೌಕರರಂತೆ ಪರಿಗಣಿಸಿ ನಿಯಮ ರೂಪಿಸಬೇಕು’ ಎಂದು ಆಗ್ರಹಿಸಿದ್ದಾರೆ. ತಾಲೂಕ ಪ್ರಧಾನ ಕಾರ್ಯದರ್ಶಿ ಪಾರ್ವತಿ ಛಲವಾದಿ ಮಾತನಾಡಿ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ/ಯುಕೆಜಿ ಪ್ರಾರಂಭಿಸಬೇಕು ಅಗತ್ಯವಿರುವ ಅನುಧಾನ ಮೀಸಲಿಡಬೇಕು, ಎಲ್ಲಾ ಕಾರ್ಯಕರ್ತೆಯರಿಗೆ ಇಎಸ್‌ಐ ಹಾಗೂ ಪಿಎಪ್ ಕೊಡಬೇಕು, ಗುಣಮಟ್ಟದ ಆಹಾರ ಪೋರೈಕೆ ಮಾಡಬೇಕು, ನಿವೃತ್ತರಾದ ಕಾರ್ಯಕರ್ತೆಯರಿಗೆ ಗ್ರ್ಯಾಜೂಟಿ ಹಣ 183 ಕೋಟಿ ಬಿಡುಗಡೆ ಮಾಡಬೇಕು,
ಖಾಲಿ ಇರುವ ಹುದ್ದೆಗಳನ್ನ ಶೀಘ್ರದಲ್ಲೇ ಭರ್ತಿ ಮಾಡಬೇಕು ಹಾಗೂ ಚುನಾವಣಾ ಕೆಲಸದಿಂದ ನಮ್ಮನ್ನು ಕೈಬೀಡಬೇಕು ಮುಂಗಡವಾಗಿ ಮೊಟ್ಟೆ, ಗ್ಯಾಸ್, ಕರೆನ್ಸಿ, ತರಕಾರಿ, ಆಡಳಿತ ವೆಚ್ಚ, ಸಾದಿಲ್ವಾರು ಹಾಕದೆ ಪಲಿತಾಂಶ ಕೇಳಬಾರದು, ಎಪ್ ಆರ್ ಎಸ್ ಕೈಬೀಡಬೇಕು ಗುಣಮಟ್ಟದ ಮೊಬೈಲ್ ನೀಡಬೇಕು, ಹಾಗೂ ವೇತನ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಇದೇ ಮಾರ್ಚ 23 ರಿಂದ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಅನಿರ್ದಿಷ್ಟ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಬಸಮ್ಮ ಉಣಚಗೇರಿ, ಯಲ್ಲುಬಾಯಿ ಮ್ಯಾಗೇರಿ, ಸುಜಾತ ಛಲವಾದಿ , ರತ್ನಾ ವಜ್ರಬಂಡಿ, ಸಾವಿತ್ರಿ ಅಂಗಡಿ, ಗೌರಮ್ಮ ಬೇಲೇರಿ, ಪ್ರೇಮಾ ಹುಬ್ಬಳ್ಳಿ, ವೇದಾ ದೇಸಾಯಿ, ಅನುಸೂಯಾ ಚವಡಿ, ನೀಲಮ್ಮ ಗಿರಡ್ಡಿ, ಸೇರಿದಂತೆ ಅನೇಕ ಕಾರ್ಯಕರ್ತೆಯರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 