ವಿಶಾಖಪಟ್ಟಣಂ, ಅ 3: ರೋಹಿತ್ ಶಮರ್ಾ (176 ರನ್, 244 ಎಸೆತಗಳು) ಹಾಗೂ ಮಯಾಂಕ್ ಅಗರ್ವಾಲ್ (ಔಟಾಗದೆ 138 ರನ್) ಅವರ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಇಲ್ಲಿನ ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಇಂದು ವಿಕೆಟ್ ನಷ್ಟವಿಲ್ಲದೆ 202 ರನ್ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಭೋಜನ ವಿರಾಮದ ವೇಳೆಗೆ 88 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟೆಕ್ಕೆ 324 ರನ್ ಗಳಿಸಿದೆ. ಬೆಳೆಗ್ಗೆ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ಹಿಟ್ಮನ್ ರೋಹಿತ್ ಶರ್ಮಾ ಜೋಡಿಯು ಅದ್ಭುತ ಬ್ಯಾಟಿಂಗ್ ಮುಂದುವರಿಸಿತು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 317 ರನ್ ಗಳಿಸಿತು. ಬುಧವಾರ ಆರಂಭಿನಾಗಿ ಮೊದಲ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಅವರು ಗುರುವಾರ ಕೂಡ ಅದೇ ಬ್ಯಾಟಿಂಗ್ ಮುಂದುವರಿಸಿದರು. ಸೊಗಸಾದ ಪ್ರದರ್ಶನ ತೋರಿದ ರೋಹಿತ್ ಆಫ್ರಿಕಾ ಬೌಲರ್ಗಳನ್ನು ಸಮಯೋಜಿತವಾಗಿ ಎದುರಿಸಿದರು. 244 ಎಸೆತಗಳನ್ನು ಎದುರಿಸಿದ ಅವರು ಆರು ಸಿಕ್ಸರ್ ಹಾಗೂ 23 ಬೌಂಡರಿಯೊಂದಿಗೆ 176 ರನ್ ಗಳಿಸಿದರು. ದ್ವಿಶತಕದತ್ತ ಮುನ್ನಗ್ಗುತ್ತಿದ್ದ ರೋಹಿತ್ ಶರ್ಮಾ ಅವರನ್ನು ಸ್ಪಿನ್ನರ್ ಕೇಶವ್ ಮಹರಾಜ್ ಕಟ್ಟಿ ಹಾಕಿದರು. ಆರಂಭಿನಾಗಿ ಮೊದಲ ಶತಕ ಸಿಡಿಸಿ ಬುಧವಾರ ದಾಖಲೆ ನಿರ್ಮಿಸಿದ್ದ ರೋಹಿತ್ ಇಂದು ಆರಂಭಿಕನಾಗಿ ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಮೊದಲನೇ ಸ್ಥಾನದಲ್ಲಿ ಸಿಧು (8 ಸಿಕ್ಸರ್) ಇದ್ದಾರೆ. ರೋಹಿತ್ ಈ ಇನಿಂಗ್ಸ್ನಲ್ಲಿ ಆರು ಸಿಕ್ಸರ್ ಬಾರಿಸಿದ್ದಾರೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್ ಇದ್ದಾರೆ. ನಂತರ. ಅಮೋಘ ಬ್ಯಾಟಿಂಗ್ ಮುಂದುವರಿಸಿದ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್ವಾಲ್ ಟೆಸ್ಟ್ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕ ಸಿಡಿಸಿ ಎಲ್ಲರ ಪ್ರೀತಿಗೆ ಭಾಜನರಾದರು. 270 ಎಸೆತಗಳನ್ನು ಎದುರಿಸಿದ ಅವರು ಮೂರು ಸಿಕ್ಸರ್ 16 ಬೌಂಡರಿಯೊಂದಿಗೆ ಅಜೇಯ 138 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಚೇತೇಶ್ವರ ಪೂಜಾರ (ಅಜೇಯ 6 ರನ್) ಇದ್ದಾರೆ. ಸಂಕ್ಷಿಪ್ತ ಸ್ಕೋರ್ ಭಾರತ ಪ್ರಥಮ ಇನಿಂಗ್ಸ್ (ಭೋಜನ ವಿರಾಮ) 88 ಓವರ್ಗಳಲ್ಲಿ 324/1 (ರೋಹಿತ್ ಶರ್ಮಾ 176, ಮಯಾಂಕ್ ಅಗರ್ವಾಲ್ ಔಟಾಗದೆ 138; ಕೇಶವ್ ಮಹರಾಜ್ 121 ಕ್ಕೆ 1)