ಹಂದಿಗುಂದ ಶಿವಾನಂದ ಸ್ವಾಮೀಜಿಗಳಿಗೆ ಗೌರವ ಸನ್ಮಾನ

ಹಂದಿಗುಂದ ಶಿವಾನಂದ ಸ್ವಾಮೀಜಿಗಳಿಗೆ ಗೌರವ ಸನ್ಮಾನ Tribute to Handigunda Shivananda Swamiji

ಪಾಲಬಾವಿ 15 : ಧಾರವಾಡ ಜಿಲ್ಲಾ ಕುಂದಗೋಳ ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಶ್ರೀ ಚನ್ನವಿರೇಶ್ವರ ವಿರಕ್ತಮಠದಲ್ಲಿ ಬಸವ ಪುರಾಣ ಮಂಗಳ ಹಾಗೂ ಪಂಚಪೂಜ್ಯರ ಗದ್ದುಗೆಗಳ ಲೋಕಾರೋ​‍್ಣತ್ಸವವು ಕಳೆದ ಫೆಬ್ರವರಿ 23 ರಿಂದ ಮಾರ್ಚ್‌ 15 ರ ವರೆಗೆ "ಬಸವ ಪುರಾಣ" ವನ್ನು ನಡೆಸಿಕೊಟ್ಟ ಪ್ರಯುಕ್ತ ಬಸವ ಪುರಾಣ ಮಂಗಲೋತ್ಸವದ ಕಾರ್ಯಕ್ರಮದಲ್ಲಿ  ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಪೂಜ್ಯರು ಪೀಠಾಧಿಪತಿ ಶಿವಾನಂದ ಮಹಾ ಸ್ವಾಮಿಗಳನ್ನು ಮುಳ್ಳಹಳ್ಳಿಯ ವಿರಕ್ತಮಠದ ಶಿವಯೋಗಿಶ್ವರ ಸ್ವಾಮಿಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ಯೋಗೇಂದ್ರ ಸ್ವಾಮೀಜಿ ಸೇರಿಕೊಂಡು ಪೂಜ್ಯರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಂಟೂರ ರಾಮಲಿಂಗೇಶ್ವರ ಸ್ವಾಮೀಜಿ, ಶಿವರುದ್ರಯ್ಯ ಕಲಬುರಗಿಮಠ, ಶಾಂತಕುಮಾರ ಗದ್ದಿಗೆಮಠ ಉಪಸ್ಥಿತರಿದ್ದರು.ಫೋಟೋ ಶೀರ್ಷಿಕೆ: ಮುಳ್ಳಹಳ್ಳಿ ವಿರಕ್ತಮಠದಲ್ಲಿ ಬಸವ ಪುರಾಣ ಮಂಗಲೋತ್ಸವದಲ್ಲಿ ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿರವರನ್ನು ಗೌರವಿಸಿ ಸನ್ಮಾನಿಸುತ್ತಿರುವುದು.