ಅಲ್ಪಸಂಖ್ಯಾತರಿಗೆ ಮೀಸಲಿರಿಸಿದ ಅನುದಾನ ಬಳಕೆಯಾಗಲಿ: ರಾಜೇಂದ್ರ

ಬಾಗಲಕೋಟೆ: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇಲಾಖೆವಾರು ಮೀಸಲಿರಿಸಲಾದ ಶೇ.15 ರಷ್ಟು ಅನುದಾನವನ್ನು ಕಡ್ಡಾಯವಾಗಿ ಖಚರ್ು ಮಾಡುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.

   ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಜೂನ್-19 ರಿಂದ ಅಕ್ಟೋಬರ-19 ವರೆಗೆ ಜಿಲ್ಲಾ ಪಂಚಾಯತ ಸಂಜೀವನಿ, ಎನ್.ಆರ್.ಎಲ್.ಎಂ ಹಾಗೂ ರಾಜೀವಗಾಂಧಿ ಚೈತನ್ಯ ಯೋಜನೆ, ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಹಕಾರ ಇಲಾಖೆಯವರು ಶೇ.100 ರಷ್ಟು ಭೌತಿಕ ಪ್ರಗತಿ ಸಾಧಿಸಿದರೆ, ಉಳಿದವರು ಶೇ.50ರಷ್ಟು ಮಾತ್ರ ಪ್ರಗತಿ ಸಾದಿಸಿದ್ದು, ಉಳಿದ ಇಲಾಖೆಗಳು ಸಂಪೂರ್ಣ ಅನುದಾನ ಬಳಕೆ ಮಾಡಲು ತಿಳಿಸಿದರು. 

ವಿವಿಧ ಇಲಾಖೆಗಳಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ.15 ರಷ್ಟು ಅನುದಾನವನ್ನು ಅಲ್ಪಸಂಖ್ಯಾತರಿಗೆ ಮೀಸಲಿರಿಸಿ, ಖಚರ್ು ಮಾಡುವ ಮೂಲಕ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು.

   ಅಧಿಕಾರಿಗಳು ಪ್ರತಿ ದಿನ ಇಂತಿಷ್ಟು ಕೆಲಸ ಮಾಡುವ ಸಂಕಲ್ಪ ಮಾಡಬೇಕು. ಜವಾಬ್ದಾರಿತನದಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದ ಕೇಸ್ ವರ್ಕರ್ಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಬೇಕು. ಯಾವುದೇ ರೀತಿಯಲ್ಲಿ ಕಚೇರಿಯ ಕಡತಗಳ ಕೆಲಸ ಬಾಕಿ ಉಳಿದಂತೆ ನೋಡಿಕೊಳ್ಳಲು ಸೂಚಿಸಿದರು. 

ನಿವೇಶನ ರಹಿತ ಅಲ್ಪಸಂಖ್ಯಾತರ ಗ್ರಾಮ ಪಂಚಾಯತಿವಾರು ಪಟ್ಟಿ ಮಾಡಬೇಕು. ಸ್ಮಶಾನಕ್ಕೆ ನಿವೇಶನಗಳ ಬೇಡಿಕೆ ಪಟ್ಟಿ ಮಾಡಿ ನೀಡಬೇಕು. ಸರಕಾರ ಜಾರಿಗೆ ತಂದ ಯೋಜನೆಗಳ ಸಮರ್ಪಕ ಅನುಷ್ಟಾನಗೊಳ್ಳಬೇಕು. ವಿವಿಧ ಇಲಾಖೆಗಳು ಶೇ.15 ರಷ್ಟು ಅನುದಾನವನ್ನು ಮೀಸಲಿರಿಸಿ, ಅಲ್ಪಸಂಖ್ಯಾತರ ಫಲಾನುವಿಗಳಿಗೆ ದೊರೆಯುವಂತಾಗಬೇಕೆಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 4344 ಅಲ್ಪಸಂಖ್ಯಾತರ ವಿದ್ಯಾಥರ್ಿಗಳು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವುದಾಗಿ  ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ತಿಳಿಸಿದರೆ.

           ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಸಕ್ತ ಸಾಲಿಗೆ 57 ಸೇರಿ ಒಟ್ಟು ಇಲ್ಲಿಯವರೆಗೆ ಒಟ್ಟು 311 ಅಲ್ಪಸಂಖ್ಯಾತರ ಅಭ್ಯಥರ್ಿಗಳು ಉದ್ಯೋಗಕ್ಕೆ  ನೊಂದಾಯಿಸಿದ್ದು, ಈ ಪೈಕಿ 18 ಅಭ್ಯಥರ್ಿಗಳನ್ನು ನೇಮಕಾತಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಸಭೆಗೆ ತಿಳಿಸಿದರು. ಶಿಕ್ಷಣ, ಮನೆ ಹಾಗೂ ಉದ್ಯೋಗಕ್ಕೆ ಸೇರಿದಂತೆ ಶೇ.40 ಸಾಲ ವಿತರಿಸಲಾಗಿದೆ ಎಂದು ಜಿಲ್ಲಾ ಅಗ್ರಣೀ ಬ್ಯಾಂಕ್ನ ಪ್ರತಿನಿಧಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಪೇಶ ಇಮಾಮ ಗೌರಧನ ಕಾರ್ಯಕ್ರಮದಡಿ ಒಟ್ಟು 271 ಪೇಶ ಇಮಾಮದಾರರಿಗೆ ಹಾಗೂ 271 ಮೌಜನರಿಗೆ ಜೂನ್-2019 ರಿಂದ ಅಗಸ್ಟ-19 ವರೆಗೆ ಗೌರವಧನವನ್ನು ನೀಡಲಾಗಿದ್ದು, ಸೆಪ್ಟಂಬರ ಮತ್ತು ಅಕ್ಟೋಬರ ಮಾಹೆಯ ಗೌರವಧನ ಮಾತ್ರ ಬಾಕಿ ಇರುವುದಾಗಿ ಜಿಲ್ಲಾ ವಕ್ಪ್ ಅಧಿಕಾರಿಗಳು ಸಭೆಗೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಕೊಡಮಾಡಲ್ಪಡುವ ಪ್ರವಾಸಿ ಟ್ಯಾಕ್ಸಿಗೆ ಅಜರ್ಿಗಳನ್ನು ಆಹ್ವಾನಿಸಲಾಗಿದ್ದು, ಅಜರ್ಿಗಳ ಪರಿಶೀಲನೆಗೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯ ನಡೆಸಲು ದಿನಾಂಕ ನಿಗಧಿಪಡಿಸಿರುವುದಾಗಿ ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಯೋಜನಾ ನಿದರ್ೇಶಕ ವಿ.ಎಸ್.ಹಿರೇಮಠ, ಅಲ್ಪಸಂಖ್ಯಾತರ ಇಲಾಖೆಯ ಉಪನಿದರ್ೇಶಕ ಎಂ.ಎನ್.ಮೇಲಿನಮನಿ, ಕೃಷಿ ಇಲಾಖೆಯ ಉಪನಿದರ್ೇಶಕ ಎಸ್.ಬಿ.ಕೊಂಗವಾಡ, ತೋಟಗಾರಿಕೆ ಇಲಾಖೆಯ ಉಪನಿದರ್ೇಶಕ ಪ್ರಭುರಾಜ ಹಿರೇಮಠ, ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ದೇವೆಂದ್ರ ಧನಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಎ.ಕೆ.ಬಸಣ್ಣವರ ಸೇರಿದಂತೆ ನಾಮನಿದರ್ೇಶಿತ ಸದಸ್ಯರು ಉಪಸ್ಥಿತರಿದ್ದರು.