ಲೋಕದರ್ಶನ ವರದಿ
2002ರಲ್ಲಿ ಪ್ರಾರಂಭಗೊಂಡ ಮದಭಾವಿ ಗ್ರಂಥಾಲಯ ಸುಸಜ್ಜಿತವಾಗಲಿ
ಸಂಬರಗಿ 02: ಮದಭಾವಿ ಗ್ರಾಮದಲ್ಲಿ 2002ರಲ್ಲಿ ಗ್ರಂಥಾಲಯ ಪ್ರಾರಂಭವಾಯಿತು. 23 ವರ್ಷ ಕಳೆದರೂ ಸಹ ಇನ್ನೂ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ ಇಲ್ಲ. ಒಂದೇ ಕೊನೆಯಲ್ಲಿ ಗ್ರಂಥಾಲಯ, ಗ್ರಂಥಪಾಲರು, ಓದುಗಾರರು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಸುಸಜ್ಜಿತ ಗ್ರಂಥಾಲಯ ಯಾವಾಗ ಸಿಗುವುದು ಎಂಬ ನೀರೀಕ್ಷೆಯಲ್ಲಿ ಗ್ರಾಮಸ್ಥರು ಇದ್ದಾರೆ.
ರಾಜ್ಯ ಸರಕಾರ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಲು ಅಶಿಕ್ಷಿತರ ಪ್ರಮಾಣ ಕಡಿಮೆಯಾಗಲಿ ಮತ್ತು ಶಿಕ್ಷಿತರ ಪ್ರಮಾಣ ಹೆಚ್ಚಾಗಲಿ ವಿಶ್ವದಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಗ್ರಾಮ ಮಟ್ಟದಲ್ಲಿ ತಿಳಿಯಲಿ ಎಂಬ ಕಾರಣಕ್ಕಾಗಿ 2002ರಲ್ಲಿ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಿದರು. ಆದರೆ ಸುಸಜ್ಜಿತ ಕಟ್ಟಡವಿಲ್ಲ. ಸಮುದಾಯ ಭವನದಲ್ಲಿ ಗ್ರಂಥಾಲಯ ನಡೆಯುತ್ತಿದೆ. ಪ್ರತಿ ಗ್ರಂಥಾಲಯಕ್ಕೆ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮೀಣ ಭಾಗದ ಜನರು ಒತ್ತಾಯಿಸಿದ್ದಾರೆ.
ಮದಭಾವಿ ಗ್ರಾಮದಲ್ಲಿ 3 ಪ್ರೌಢಶಾಲೆ, 1 ಪಿ.ಯು.ಸಿ ಕಾಲೇಜು, 1 ಮಹಾ ವಿದ್ಯಾಲಯ ಇದ್ದು, ಅಲ್ಲಿ ವಿದ್ಯಾರ್ಥಿಗಳು ಶಾಲೆಯ ವೇಳೆಯವರೆಗೆ ಗ್ರಂಥಾಲಯದಲ್ಲಿ ಕುಳಿತು ಅಭ್ಯಾಸ ಮಾಡಿ ಹಲವಾರು ವಿದ್ಯಾರ್ಥಿಗಳು ಸೇನೆಯಲ್ಲಿ ಭರ್ತಿಯಾಗಿದ್ದಾರೆ. ದಿನ ನಿತ್ಯ ಸುಮಾರು ನೂರಕ್ಕಿಂತ ಹೆಚ್ಚಿನ ಮಕ್ಕಳು ಆ ಗ್ರಂಥಾಲಯದಲ್ಲಿ ಜನರಲ್ ನಾಲೆಡ್ಜ, ಸ್ಪರ್ದಾ ಪರೀಕ್ಷೆ ಪುಸ್ತಕಗಳು ಹಲವಾರು ವಿಷಯಗಳ ಪುಸ್ತಕಗಳನ್ನು ಓದಲು ಬರುತ್ತಾರೆ. ಆದರೆ ಸುಸಜ್ಜಿತ ಕಟ್ಟಡ ಇಲ್ಲ. ಇದ್ದಿರುವ ಸಮುದಾಯ ಭವನ ಬಿರುಕು ಬಿಟ್ಟುದ್ದು, ಗ್ರಂಥಾಲಯದಲ್ಲಿ ಎಲ್ಲ ವ್ಯವಸ್ಥೆ ಇದೆ ಆದರೆ ಸುಸಜ್ಜಿತ ಕಟ್ಟಡ ಇಲ್ಲ.
ಸಮುದಾಯ ಭವನದಲಿ ನಡೆಯುತ್ತಿರುವ ಗ್ರಂಥಾಲಯ ಬೀಳುವ ಸಾಧ್ಯತೆ ಇದೆ. ಅಲ್ಲಿ ಓದಲು ಬರುವ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಜಿಲ್ಲೆಯ ವರಿಷ್ಠ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರಿಗೆ ಗಮನಕ್ಕೆ ತಂದರೂ ಇನ್ನೂವರೆಗೆ ಕೋಣೆಗಳ ಕೊರತೆ ಇದ್ದು, ಹೊಸದಾಗಿ ಕಟ್ಟಡ ಇಲ್ಲ. ಜೀವ ಕೈಯಲ್ಲಿ ಹಿಡಿದು ಸಮುದಾಯ ಭವನದಲ್ಲಿ ಗ್ರಂಥಲಯ ನಡೆಸುತ್ತಿದ್ದಾರೆ. ಈ ಗ್ರಂಥಾಲಯದ ಭಾಗ್ಯ ಯಾವಾಗ ತೆರೆಯುವುದು ಎಂಬುದು ಜನರ ಆಶಯವಾಗಿದೆ.
ಕಳೆದ 23 ವರ್ಷಗಳಿಂದ ಗ್ರಂಥಾಲಯದಲ್ಲಿ ಇದ್ದು, ಸರಕಾರದ ಅನುದಾನ ಇಲ್ಲದೆ ಕಟ್ಟಡ ಇಲ್ಲ. ಈಗ ಗ್ರಾಮದ ಜನಸಂಖ್ಯೆಯ ಅನುಗುಣವಾಗಿ ಗ್ರಂಥಾಲಯಕ್ಕೆ ಕನಿಷ್ಠ 4 ಕೋಣೆಗಳ ಅವಶ್ಯಕತೆ ಇದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಗ್ರಂಥಪಾಲಕ ಜ್ಯೋತಿಬಾ ಶಿಂಧೆ
ಹೊಸದಾಗಿ ಗ್ರಂಥಾಲಯ ಕಟ್ಟಡ ಮಾಡುವ ಅನುದಾನ ಇಲ್ಲ. ಗ್ರಂಥಾಲಯದಲ್ಲಿ ಇನ್ನುಳಿದ ಕಾಮಗಾರಿ ಮಾಡಿದ್ದೇವೆ. ಸರಕಾರ ಅನುದಾನ ಬಿಡುಗಡೆ ಮಾಡಿದರೆ ಸುಸಜ್ಜಿತ ಕಟ್ಟಡವನ್ನು ಮಾಡಲಾಗುವುದು.
ಸಂತೋಷ ಸನದಿ
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ