ಲೋಕದರ್ಶನ ವರದಿ
ಖಾನಾಪೂರ 06: ತಾಲ್ಲೂಕಿನ ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಶೈಲ ರಾಚಪ್ಪ ಮಾಟೊಳ್ಳಿ ಹಾಗೂ ಉಪಾಧ್ಯಕ್ಷರಾಗಿ ನಾಗೇಂದ್ರ (ರಮೇಶ) ಮಾರುತಿ ಕುನ್ನೂರಕರ ಅವಿರೋಧವಾಗಿ ಆಯ್ಕೆಯಾದರು.
ಸೊಸೈಟಿಯ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ. ತೊಲಗಿ ಘೋಷಿಸಿದರು.
ನಿರ್ಧೆಶಕರಾದ ನೀಲಕಂಠ ಆರ್. ಉಳವಿ, ಯಲ್ಲಾರಿ ಪರಶುರಾಮ ನೀಲಜಕರ, ಸುರೇಶ ಕೆಂಚಪ್ಪ ಪಾಟೀಲ, ರೇಖಾ ವಿಠ್ಠಲ ಮಿಟಗಾರ, ಸುರೇಖಾ ಪದ್ಮರಾಜ ಅಂಬಡಗಟ್ಟಿ, ಚಂದ್ರು ಈಶ್ವರ ಸುತಾರ, ಮುನಾಫ್ ಮಹ್ಮದ್ರಫೀಕ ತೇರಗಾಂವ, ಮಲ್ಲಿಕಾರ್ಜುನ ಕೋಡಿ, ಕಲ್ಲಪ್ಪ ರಾ. ಸಂಗೊಳ್ಳಿ, ಬಸಪ್ಪ ಸತ್ಯನ್ನವರ ಇದ್ದರು.
ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಂದಿನ ಐದು ವರ್ಷದ ಅವಧಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಶ್ರೀಶೈಲ ಮಾಟೊಳ್ಳಿ ನೇತ್ರತ್ವದ ರೈತ ಬಂಧುಗಳ ಫೆನಲ್ ಎಲ್ಲ 12 ಸ್ಥಾನಗಳಲ್ಲಿ ವಿಜೇತರಾಗಿ ಪ್ರತಿಸ್ಪರ್ಧೆ ಗ್ರಾಮಸೇವಾ ರೈತರ ಅಭಿವೃದ್ಧಿ ಫೆನಲ್ ಸೋಲಿಸಿ ಅಧಿಕಾರದ ಗದ್ದುಗೆ ಹಿಡಿದಿದ್ದರು.
ರೈತರ ಹಿತ್ ಕಾಪಾಡಲು ಬದ್ದ: ಅಧ್ಯಕ್ಷ ಶ್ರೀಶೈಲ ಮಾಟೊಳ್ಳಿ ಮಾತನಾಡಿ, ಮೂರನೇ ಬಾರಿಗೆ ನಾನು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನಮ್ಮ ಗುರುತರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಪಾರದರ್ಶಕ ಆಡಳಿತ ನೀಡಿದ ಪರಿಣಾಮ ದಶಕದ ಹಿಂದೆ ರೂ. 35 ಲಕ್ಷ ಹಾನಿಯಲ್ಲಿದ್ದ ಸೊಸೈಟಿಯನ್ನು ಸುಸ್ಥಿತಿಯಲ್ಲಿದೆ. ಕಳೆದ ಎರಡು ವರ್ಷದಲ್ಲಿ ರೂ 4 ಲಕ್ಷಕ್ಕೂ ಮಿಕ್ಕಿ ಲಾಭ ಗಳಿಸಲಾಗಿದೆ. ಮೂವರು ರೈತರಿಗೆ ಟ್ಯಾಕ್ಟರ ನೀಡಲಾಗಿದೆ. ರೂ 3 ಕೋಟಿ ಸಾಲ ಹಂಚಲಾಗಿದೆ. ಸಕರ್ಾರದ ಸಾಲ ಮನ್ನಾ ಯೋಜನೆಯಡಿ ನಮ್ಮ ರೈತರ ರೂ. 3.50 ಕೋಟಿ ಸಾಲ ಮನ್ನಾ ಆಗಿದೆ. ಸ್ವಸಹಾಯ ಗುಂಪುಗಳಿಗೆ ರೂ 25 ಲಕ್ಷ ಸಾಲ ಹಂಚಲಾಗಿದೆ. ರೂ 5 ಲಕ್ಷ ಬಂಡವಾಳ ಹೊಂದಲಾಗಿದೆ. ಅಧುನಿಕ ತಂತ್ರಜ್ಞಾನ ಬಳಿಸಿ ರೈತರಿಗೆ ತ್ವರಿತ ಸೇವೆ ನೀಡಲಾಗುತ್ತಿದೆ. ರೈತರ ವಂತಿಕೆ ಕ್ರೋಡಿಕರಿಸಿ ಸ್ವಂತ ಕಟ್ಟಡ ಹೊಂದಲಾಗಿದೆ. ಈಗಾಗಲೆ ರೈತರಿಗೆ ಗೊಬ್ಬರ ಹಾಗೂ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಬರುವ ದಿನದಲ್ಲಿ ಕೀಟನಾಶಕ ಮತ್ತು ಬೀಜ ವಿತರಣೆ ಮಾಡುವ ಗುರಿ ಇದೆ ಎಂದರು.
ಹಿರಿಯರಾದ ಟಿ.ಎಸ್. ಮುಗಳಿಹಾಳ, ಕೃಷ್ಣ ಪರೀಟ, ಎನ್.ಆರ್. ಉಳವಿ ಮಾತನಾಡಿ, ಸಹಕಾರ ತತ್ವದಡಿ ಸಂಘ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ರೀಯಾಶೀಲ ಚಟುವಟಿಕೆ ಮೂಲಕ ಮಾದರಿ ಸೊಸೈಟಿ ಮಾಡಲು ಶ್ರಮಿಸಿ ಎಂದು ಶುಭ ಹಾರೈಸಿದರು. ಸ್ಥಳೀಯವಾಗಿ ಡಿಸಿಸಿ ಬ್ಯಾಂಕ್ ಶಾಖಾ ಕಚೇರಿ ತೆರೆಯಲು ಶ್ರಮಿಸಿ ಎಂದು ಸಲಹೆ ನೀಡಿದರು.