ಲೋಕದರ್ಶನವರದಿ
ಧಾರವಾಡ23 : 'ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ್ಗೆ ರಕ್ತದಾನ ಮಾಡಿದಲ್ಲಿ ಮಾತ್ರ, ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ ಎಂದು ಜೆ.ಎಸ್.ಎಸ್. ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಹೇಳಿದರು.
ನಗರದ ಜೆ.ಎಸ್.ಎಸ್. ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜಿಲ್ಲಾ ಆಸ್ಪತ್ರೆ, ಧಾರವಾಡ, ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ, ನವನಗರ, ಎಸ್.ಡಿ.ಎಂ. ಆಸ್ಪತ್ರೆ, ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಲಯದ ಉತ್ಸವ ಸಭಾಂಗಣದಲ್ಲಿ ಏರ್ಪಡಿಸಿದ್ದ "ಸ್ವಯಂ ಪ್ರೇರಿತ ರಕ್ತದಾನ ಶಿಬಿರ" ಉದ್ಘಾಟಿಸಿದ ಅವರು 'ರಕ್ತಕ್ಕೆ ನಿರಂತರವಾಗಿ ಬೇಡಿಕೆ ಇದ್ದೇ ಇರುತ್ತದೆ. ಅಪಘಾತಗಳು, ತುತರ್ು ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ರೋಗಿಗಳು, ಗಭರ್ಿಣಿಯರು ರಕ್ತದಾನಿಯನ್ನು ಅವಲಂಭಿಸಿರುತ್ತಾರೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆಯ ಹಿರಿಯ ವೈದ್ಯರಾದ ಡಾ. ವ್ಹಿ.ಡಿ. ಕಪರ್ೂರಮಠ ಮಾತನಾಡಿ 'ಜೆ.ಎಸ್.ಎಸ್. ಸಂಸ್ಥೆಯ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳು ರಕ್ತದಾನ ಮಾಡುವುದರಲ್ಲಿ ಯಾವಾಗಲೂ ಮುಂದು. ಅತೀ ಹೆಚ್ಚಿನ ರಕ್ತದಾನಿಗಳು ಈ ಮಹಾವಿದ್ಯಾಲಯದಲ್ಲಿ ಇದ್ದಾರೆ. ವಿದ್ಯಾಥರ್ಿಗಳು ನೀಡುವ ರಕ್ತ ಅತ್ಯಂತ ಪರಿಶುದ್ಧ, ಹಾಗಾಗಿ ರೋಗಿಗಳು ಬೇಗನೆ ಗುಣಮುಖರಾಗಲು ತುಂಬ ಸಹಕಾರಿಯಾಗಿದೆ. ರಕ್ತ ಹಾಗೂ ರಕ್ತದಾನದ ಮಹತ್ವ ಪ್ರತಿಯೊಬ್ಬರಿಗೆ ತಿಳಿದಿರಬೇಕು. ರಕ್ತದಾನದಿಂದ ದಾನಿಗಳಿಗೆ ದೇಹ ಆರೋಗ್ಯ, ಒಳ್ಳೆಯ ವಿಚಾರ ಹಾಗೂ ನವಚೇತನದ ಉತ್ಸಾಹ ದೊರಕುವುದು' ಎಂದರು.
ಜೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಿ.ಕೃಷ್ಣಮೂತರ್ಿ, ಉಪಪ್ರಾಚಾರ್ಯರಾದ ಡಾ. ಚಿತ್ರಾ ದೈಜೋಡೆ, ರಕ್ತ ಭಂಡಾರ ಅಧಿಕಾರಿಗಳಾದ ಡಾ. ಉಮೇಶ ಹಳ್ಳಿಕೇರಿ, ಡಾ. ಪ್ರಭು, ಡಾ. ಲಕ್ಷ್ಮಿದೇವಿ, ಶ್ರೀ ಎಂ.ಟಿ. ಉಪಾಧ್ಯೆ, ಡಾ. ಆರ್.ಟಿ. ಮಹೇಶ ಉಪಸ್ಥಿತರಿದ್ದರು.
ಜೆ.ಎಸ್.ಎಸ್. ಮಹಾವಿದ್ಯಾಲಯದ ಯುವ ರೆಡ್ಕ್ರಾಸ್ನ ಅಧಿಕಾರಿಗಳಾದ ಪ್ರೊ.ಟಿ.ಎಂ. ಶ್ರೀಧರ ಸ್ವಾಗತಿಸಿದರು. ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ. ಎಸ್.ಕೆ. ಸಜ್ಜನ ವಂದಿಸಿದರು. ಕು. ಮುಡಬಸನಗೌಡ ನಿರೂಪಿಸಿದರು. ಸುಮಾರು 250ಕ್ಕೂ ಹೆಚ್ಚು ವಿದ್ಯಾಥರ್ಿಗಳು ರಕ್ತದಾನ ಮಾಡಿದರು.