ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ

ವಿಜಯಪುರ, 4 : ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ಈಗಿರುವ ಅಂಗನವಾಡಿ ಕೇಂದ್ರ ವೇಳಾಪಟ್ಟಯಲ್ಲಿ ಮೂರು ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಾತ್ಕಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು ಇವೇ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಅಂಗನವಾಡಿ ನೌಕರರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.     ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಸಹಸ್ರಾರು ಅಂಗನವಾಡಿ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲಲಾಧೀಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕನರ್ಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ ಅವರು ಮಾತನಾಡಿ, ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಪ್ರಾಂರಂಭವಾಗುತ್ತಿರುವ ಎಲ್.ಕೆ.ಜಿ.-ಯು.ಕೆ.ಜಿಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೂಡಲೇ ವಹಿಸಬೇಕು. ಐಸಿಡಿಎಸ್ 6 ಉದ್ದೇಶಗಳಿಗೆ ಬಿಟ್ಟು ಉಳಿದ ಯಾವುದೇ ಕೆಲಸವನ್ನು ಅ0ಗನವಾಡಿ ನೌಕರರಿ0ದ ಕಡ್ಡಾಯವಾಗಿ ಮಾಡಿಸಬಾರದು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ವಗರ್ೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌ ಕರ್ಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್ ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಒತತಾಯಿಸಿದರು.

ಜಿಲ್ಲಾ ಅಧ್ಯಕ್ಷೆ ಸುನಂದಾ ಬಿ. ನಾಯಿಕ ಮಾತನಾಡಿ, ಅಂಗನವಾಡಿ ಸಹಾಯಕಿ ಕಾರ್ಯಕತರ್ೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು.  ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕತರ್ೆ ಮತ್ತು ಸಹಾಯಕಿಯರ ಹೆಣ್ಣು ಮಕ್ಕಳಿಗೆ ಮಾತ್ರ ವಲ್ಲದೆ ಕುಟುಂಬದವರಿಗೆ ಎಂದು ತಿದ್ದುಪಡಿಯಾಗಬೇಕು. ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕತರ್ೆಯರ ಹುದ್ದೆಗಳನ್ನು ತುಂಬಬೇಕು. ಅಂಗನವಾಡಿ ಕಾರ್ಯಕತರ್ೆಯರಿಗೆ ಸೇವಾ ನಿಯಾಮಾವಳಿ ರಚಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಕಾರ್ಯದಶರ್ಿ ಅಶ್ವಿನಿ ತಳವಾರ, ಕನರ್ಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿದರು. ವಿಜಯಪುರದ ಗೌರವ ಅಧ್ಯಕ್ಷೆ ಸರಸ್ವತಿ ಮಠ, ತಾಲೂಕಾ ಅಧ್ಯಕ್ಷರಾದ ಆರತಿ ಜಾನಕರ, ಸುವರ್ಣ ಹಲಗಣಿ, ಗೀತಾ ಜಾಧವ, ಶೋಭಾ ಕಬಾಡೆ, ಉಷಾ ಕುಲಕಣರ್ಿ, ದಾನಮ್ಮ ಗುಗ್ಗರೆ, ಶೋಭಾ ಕುಂಬಾರ, ಪ್ರತಿಭಾ ಕುರಡೆ, ಶಾರದಾ ತಾಂಬೆ, ದಾಕ್ಷಾಯಿಣಿ ಅವಟಿ, ಸರೋಜಿನಿ ಸಿಂಪಿಗೇರ, ಸಾವಿತ್ರಿ ಭೈರಗೊಂಡ, ಸತ್ಯಮ್ಮ ಹಡಪದ, ಕಮಲಾ ಹಳ್ಳದಮನಿ, ಸೈರಾಬಾನು ಜಮಾದಾರ, ಜರೀನಾ ಸಂಖದ, ಲೈಲಾಬಿ ನದಾಫ, ಪದ್ಮಾವತಿ ಬಿರಾದಾರ ಸೇರಿದಂತೆ ಎಲ್ಲ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.