ಸಾಮೂಹಿಕ ವಿವಾಹ ಬಡವರಿಗೆ ವರದಾನ ಅಭಿನವ ಚನ್ನಬಸವ ಸ್ವಾಮೀಜಿ

Mass marriage is a boon for the poor, says Abhinava Channabasava Swamiji

ಸಾಮೂಹಿಕ ವಿವಾಹ ಬಡವರಿಗೆ ವರದಾನ ಅಭಿನವ ಚನ್ನಬಸವ ಸ್ವಾಮೀಜಿ  

ಹೂವಿನ ಹಡಗಲಿ 14: ಸಾಮೂಹಿಕ ಮದುವೆಗಳು ಬಡವರಿಗೆ ವರದಾನ ಆಗಿವೆ ಎಂದು ಹಿರೆಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ರಾಮ ದೇವರ ಜಾತ್ರೆ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. 

ಸರಳ ವಿವಾಹ ಬದುಕಿಗೆ ಶ್ರೇಷ್ಠತೆ ತಂದುಕೊಡುತ್ತವೆ.ನವ ದಂಪತಿಗಳು ಗುರು ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸಿಕೊಳ್ಳಿ ಎಂದು ತಿಳಿಸಿದರು.ಜೀವನದಲ್ಲಿ ಸಾಮರಸ್ಯ ಬಹಳ ಮುಖ್ಯ. ಸತಿ ಪತಿಗಳು ಬದುಕೆಂಬ ಬಂಡಿಯ ಎರಡು ಗಾಲಿಗಳು ಇದ್ದ ಹಾಗೆ. ಸಮತೋಲನ ಸಹಕಾರದಿಂದ ಬಾಳಿರಿ ಎಂದರು.ಶ್ರೀ ರಾಮ ದೇವಸ್ಥಾನದ ಧರ್ಮಕರ್ತ ಡಾ ರಾಮಸ್ವಾಮಿ ರಾಕೇಶಯ್ಯ ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ ಎಂದರು.ತುರುವಿಹಾಳ ಮಠದ ಚಿದಾನಂದಯ್ಯ, ಚೌಕಿ ಮಠದ ಗಾಡಿತಾತಾ, ವೀರಶೈವ ಮಹಾಸಭದ ಅಧ್ಯಕ್ಷ ಸಿ ಕೆ ಎಂಬಸವಲಿಂಗ ಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಅಟವಾಳಗಿ ಕೊಟ್ರೇಶ್, ಹಕ್ಕಂಡಿ ಶಿವನಾಗಪ್ಪ, , ಊಳಿಗದ ಹನುಮಂತಪ್ಪ,ಸ್ವಾಮಿನಾಥ ರಾಮಸ್ವಾಮಿ ಇತರರು ಉಪಸ್ಥಿತರಿದ್ದರು.ಜಾತ್ರಾ ಮಹೋತ್ಸವ ನಿಮಿತ್ತ ಅನ್ನ ಸಂತರೆ​‍್ಣ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.