ಶ್ರೀನಗರ, ಮೇ 2ಪ್ರಧಾನಿ ಮೋದಿ ಮರು ಆಯ್ಕೆ ಬಯಸುತ್ತಿರುವ ಸಮಯದಲ್ಲಿ ಜೈಶ್ ಎ ಮಹಮ್ಮದ್ ಉಗ್ರ ಮಸೂದ್ ಅಝರ್ನನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಮುಂದಾಗಿರುವುದು ಬಿಜೆಪಿಗೆ ಆನೆಬಲ ನೀಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವ್ಯಂಗವಾಡಿದ್ದಾರೆ ಕಾಶ್ಮೀರದಲ್ಲಿನ ಭಯೋತ್ಪಾದನೆ ಬಗ್ಗೆ ಮತ್ತು ಜೆಎಂನಿಂದ 44 ಸಿಆಪರ್ಿಎಫ್ ಸಿಬ್ಬಂದಿಗಳು ಈ ವರ್ಷ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿನ ಅವಂತಿಪೋರಾದಲ್ಲಿ ಹುತಾತ್ಮರಾದ ಕುರಿತು ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ ಅಝರ್ಗೆ ಜಾಗತಿಕ ಭಯೋತ್ಪಾದಕ ಪಟ್ಟ ಒಂದು ಸಾಂಕೇತಿಕ ಜಯ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓಮರ್, ಪ್ರತಿ ಸಲ ಬಿಜೆಪಿ ಪ್ರಚಾರಕ್ಕೆ ಒಂದು ಅಸ್ತ್ರವನ್ನು ಪಡೆಯುತ್ತದೆ. ಮೋದಿ ಮರುಚುನಾವಣೆ ಬಯಸುತ್ತಿರುವ ವೇಳೆಯಲ್ಲಿ ಅಝರ್ಗೆ ಈ ಪಟ್ಟ ಲಭಿಸಿದೆ. ಇದಕ್ಕಿಂತ ಉತ್ತಮ ಸಮಯ ಬೇಕಿಲ್ಲ ಎಂದು ವ್ಯಂಗ್ಯ ನುಡಿದಿದ್ದಾರೆ.
ಒಂದು ಸಾಂಕೇತಿಕ ಜಯ ಸಾಧಿಸಲು ಎಷ್ಟು ಬೇಗ ಹುತಾತ್ಮ ಯೋಧರ ಬಲಿದಾನವನ್ನು ನದಿಗೆ ಎಸೆಯಲಾಗಿದೆ. ವಿಶ್ವಸಂಸ್ಥೆ ಈ ನಿರ್ಣಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದನೆಯ, ಪುಲ್ವಾಮ ದಾಳಿಯ ಉಲ್ಲೇಖವಿಲ್ಲ ಎಂದು ಓಮರ್ ಬೇಸರ ವ್ಯಕ್ತಪಡಿಸಿದ್ದಾರೆ.