ಸಾರ್ವಜನಿಕರಿಗೆ ಮಾಸ್ಕ್ ವಿತರಣೆ

ಲೋಕದರ್ಶನವರದಿ

ಬ್ಯಾಡಗಿ06: ತಾಲೂಕಿನ ಕಾಗಿನೆಲೆ ಗ್ರಾಮದ ಪೋಲಿಸ್ ಠಾಣೆಯ ಎ.ಎಸ್.ಆಯ್. ಅಶೋಕ  ಕೊಂಡ್ಲಿ ಅವರು ರವಿವಾರ  ತಮ್ಮ ಮದುವೆಯ 25  ವರ್ಷಗಳ ನೆನಪಿಗಾಗಿ ಸಾರ್ವಜನಿಕರಿಗೆ ಮಾಸ್ಕ್ಗಳನ್ನು  ಹಾಗೂ ಬಡ ನಿರ್ಗತಿಕ ಕುಟುಂಬದ ಜನರಿಗೆ ಊಟದ ವಿತರಣೆಯೊಂದಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು  ಮಾಡುವ ಮೂಲಕ ತಮ್ಮ 25 ನೇ, ವರ್ಷದ ಮದುವೆ ಸಂಭ್ರಮವನ್ನು ಆಚರಿಸಿಕೊಂಡರು. 

 ಪೋಲಿಸ ಇಲಾಖೆಯಲ್ಲಿ ಬಹಳಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಶೋಕ ಕೊಂಡ್ಲಿಯವರು ಉತ್ತಮ  ಕವಿಗಳಾಗಿದ್ದು, ತಮ್ಮ ಕವನಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಮುಂದಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಟ್ಟಿನಲ್ಲಿ ಸಕರ್ಾರದ ಲಾಕ್ಡೌನ್ ಆದೇಶವನ್ನು ಪರಿಪಾಲಿಸಬೇಕೆಂದು ಮನವಿಯನ್ನು ಮಾಡಿದ್ದಾರೆ