ವೀರೇಶ ಕುರ್ತಕೋಟಿ
ಹುನಗುಂದ; ಕಳೆದ 4ವರ್ಷಗಳಿಂದ ತಾಲೂಕಿನಲ್ಲಿ ಅನುಷ್ಠಾನಗೊಂಡ ಇಸ್ರೇಲ್ ಮಾದರಿ ಮರೋಳ ಹನಿ ನೀರಾವರಿ ಯೋಜನೆಯು ಕಳಪೆ ಕಾಮಗಾರಿಯಿಂದ ರೈತ ಸಮುದಾಯಕ್ಕೆ ಪ್ರಯೋಜನವಾಗದೆ ಸಂಕಷ್ಟಕ್ಕೀಡು ಮಾಡಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ: ರಾಜೇಂದ್ರ ಹೇಳಿದರು.
ತಾಲೂಕಿನ ಮರೋಳ ಗ್ರಾಮದ ವ್ಯಾಪ್ತಿಯಲ್ಲಿ ನಿಮರ್ಾಣಗೊಂಡ ಮರೋಳ ಏತ ನೀರಾವರಿ ಮತ್ತು ಹನಿ ನೀರವರಿ ಯೋಜನೆಯ ಜಾಕ್ವೆಲ್ಗಳಿಗೆ ಮತ್ತು ಕಾಲುವೆಗಳ ಮುಖಾಂತರ ರೈತರ ಭೂಮಿಗೆ ಅಳವಡಿಸಿದ ಡ್ರಿಪ್ ಪೈಪ್ ಹಾಗೂ ಅಪೂರ್ಣ ಕಾಮಗಾರಿ ಜೊತೆಗೆ ರೈತರ ಜಮೀನುಗಳಿಗೆ ಸಮರ್ಪಕ ನೀರು ಬರದೆ ಇರುವದನ್ನು ವೀಕ್ಷಿಸಿ, ಯೋಜನೆ ನಿಮರ್ಿಸಿದ ನೆಟಾಪೀಮ್ ಮತ್ತು ಜೈನ್ ಕಂಪನಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿ ಯೋಜನೆಯು ನಿಯಮದಂತೆ 24ಸಾವಿರ ಹೆಕ್ಟೇರ ಭೂಮಿಗೆ ನೀರು ಹರಿಸುವ ಮತ್ತು 5ವರ್ಷಗಳವರೆಗೆ ನಿರ್ವಹಣಾ ಜವಾಬ್ದಾರಿ ಹೊತ್ತಿರುವ ಈ ಎರಡೂ ಕಂಪನಿಗಳು ಕಾಮಗಾರಿಯನ್ನು ಕಳಪೆಯಾಗಿ ನಿಮರ್ಿಸಿ ಒಟ್ಟು ಪ್ರದೇಶಕ್ಕೆ ಸಂಪೂರ್ಣವಾಗಿ ನೀರು ಹರಿಸದೆ ಇರುವದರಿಂದ ರೈತರ ಅನುಭವಿಸಿದ ಹಾನಿ ಸಂಕಷ್ಟಕ್ಕೆ ಜಿಲ್ಲಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಬರುವ ಸುದ್ದಿಯನ್ನು ತಿಳಿದ ಅನೇಕ ಗ್ರಾಮಗಳ ರೈತರು ಹುನಗುಂದ ಪಂಪ್ ಹೌಸ್ಗೆ ಬಂದು ಹನಿ ನೀರಾವರಿ ಯೋಜನೆ ಅನುಷ್ಠಾನಗೊಂಡು ನಾಲ್ಕು ವರ್ಷಗಳೇ ಗತಿಸಿವೆ ಒಂದು ದಿನವೂ ನಮ್ಮ ಹೊಲಕ್ಕೆ ನೀರು ಬಂದಿಲ್ಲ. ನಿತ್ಯ ಸಂಭಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಕೇಳಿದರೇ ಪೈಪ್ ಡ್ಯಾಮೇಜ್ ಆಗಿದೆ, ಅದನ್ನು ಸರಿಪಡಿಸಿ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದೆಂದು 4ವರ್ಷಗಳವರೆಗೆ ಯಾಮರಿಸುವ ಉತ್ತರವನ್ನೆ ಹೇಳುತ್ತಿದ್ದಾರೆ. ಕಂಪನಿಗಳಿಂದ ಯೋಜನೆ ನಿರ್ವಹಣೆ ಜವಾಬ್ದಾರಿ ಇನ್ನು ಕೇವಲ ಒಂದು ವರ್ಷ ಉಳಿದಿದೆ. ಹಾರಿಕೆ ಉತ್ತರ ಹೇಳುತ್ತ ಠಿಕಾಣಿ ಕೀಳಲು ಪ್ರಯತ್ನಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಡಿಸಿಯವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ನೋವಿನಿಂದ ಹೇಳುತ್ತಿದ್ದ ರೈತರ ಮಾಹಿತಿಯಂತೆ ಕಾಮಗಾರಿಯು ಅಪೂರ್ಣ ಮತ್ತು ಕಳಪೆ ಹಾಗೂ ಸಂಪೂರ್ಣ ನೀರು ಹರಿಸದೆ ವಿಫಲಗೊಂಡ ಬಗ್ಗೆ ಉತ್ತರ ನೀಡದ ಕಂಪನಿಗಳ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಮೂರು ದಿನಗಳವರೆಗೆ ನೀರಾವರಿ ಪ್ರದೇಶವನ್ನು ವೀಕ್ಷಿಸುತ್ತೇನೆ. ಕಳಪೆ ಕಾಮಗಾರಿ, ಯೋಜನೆಗೆ ಅಳವಡಿಸಿದ ಕಳಪೆ ಸಾಮಗ್ರಿಗಳ ಸರಿಪಡಿಸುವಿಕೆ ಮತ್ತು ಕೆಲ ರೈತರ ಭೂಮಿಗಳಲ್ಲಿ ಒಡೆದಿರುವ ಪೈಪ್ಗಳ ಜೋಡಣೆಗಳನ್ನು ಸಮಸ್ಯೆಗಳನ್ನು ನಂತರದ 3ದಿನಗಳಲ್ಲಿ ಕಡ್ಡಾಯವಾಗಿ ಬಗೆಹರಿಸದಿದ್ದಲ್ಲಿ ಈ ಯೋಜನೆ ಬಗ್ಗೆ ಮತ್ತು ರೈತರು ಅನುಭವಿಸಿದ ನೋವಿನ ಕುರಿತು ಸರಕಾರದ ಮುಖ್ಯ ಕಾರ್ಯದಶರ್ಿಗಳವರ ಗಮನಕ್ಕೆ ತರುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತ ಜಿಲ್ಲಾಧಿಕಾರಿ ರೈತರನ್ನು ಸಂತೈಸಿದರು.
ಜಿಲ್ಲಾಧಿಕಾರಿಗಳು ಕೇಳುವ ಪ್ರಶ್ನೆಗೆ ನೆಟ್ಪೇಮ್ ಮತ್ತು ಜೈನ್ ಕಂಪನಿ ಅಧಿಕಾರಿಗಳು ಕೆಲವೊಂದು ಜೋನ್ದಲ್ಲಿ ಒಡೆದ ಪೈಪ್ ರಿಪೇರಿ ಮಾಡಲು ಆ ಹೊಲದ ಮಾಲೀಕರು ಬಿಡುತ್ತಿಲ್ಲ ಇದರಿಂದ ತಡವಾಗಿದೆ ಎಂದು ಅಧಿಕಾರಿಗಳು ನೂನುಚಿಕೊಂಡಾಗ ಅದನ್ನೆಲ್ಲ ಕಥೆ ಹೇಳೋದು ಬಿಟ್ಟು ಬಿಡಿ. ಎಲ್ಲೆಲ್ಲಿ ಪೈಪ್ಗಳು ಡ್ಯಾಮೇಜ್ ಆಗಿ ನೀರು ಹೋಗುತ್ತಿಲ್ಲ ಅದು ಯಾರ ಹೊಲದಲ್ಲಿ ಪೈಪ್ ಹೊಡೆದಿದೆ ಅದರ ವರದಿ ನೀಡಿ ನಮ್ಮ ತಹಶೀಲ್ದಾರ ಮತ್ತು ಉಪ ನಿದರ್ೇಶಕರಿಗೆ ಹೇಳಿ ಅದನ್ನು ಸರಿಪಡಿಸಿ ನೀರು ಹರಿಸುವ ವ್ಯವಸ್ಥೆ ಮಾಡಿಸಿ ಎಂದು ಹೇಳಿವ ಮೂಲಕ ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಪೈಪ್ ಡ್ಯಾಮೇಜ್ಗೊಂಡಿರುವ ಹೊಲದ ರೈತರನ್ನು ಕರೆದು ಆ ಸಮಸ್ಯೆಯನ್ನು ಬಗೆ ಹರಿಸುವಂತೆ ಸೂಚಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿದರ್ೇಶಕ ಶ್ರೀಸೈಲ ಕಂಕಣವಾಡಿ, ತಹಶೀಲ್ದಾರ ಬಸವರಾಜ ನಾಗರಾಳ, ಗ್ರೆಡ್-2 ತಹಶೀಲ್ದಾರ ಆನಂದ ಕೋಲಾರ ಸೇರಿದಂತೆ ಇತರರು ಇದ್ದರು.