ಕೋಳೂರ ಶಾಲೆಯಲ್ಲಿ ಯೋಗ ದಿನಾಚರಣೆ

Yoga Day celebration at Kolura School

ಕೋಳೂರ ಶಾಲೆಯಲ್ಲಿ ಯೋಗ ದಿನಾಚರಣೆ 

ಹಾವೇರಿ 8: ತಾಲ್ಲೂಕಿನ ಕೋಳೂರ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಹಸಿರು ಯೋಗ ಮತ್ತು ಪರಿಸರ ದಿನಾಚರಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರ/ಸರಕಾರಿ ಹೋಮಿಯೋಪತಿ ಚಿಕಿತ್ಸಾಲಯ ಕರ್ಜಗಿ ರೈಲ್ವೆ ಸ್ಟೇಷನ್ ವತಿಯಿಂದ ಆಚರಿಸಲಾಯಿತು. 

     ವೈದ್ಯಧಿಕಾರಿಗಳಾದ ಡಾ.ರಾಜಶೇಖರ ಮಾತನಾಡಿ ಪರಿಸರ ಮತ್ತು ಯೋಗ ನಮ್ಮ ಆರೋಗ್ಯಕ್ಕೆ ಅತೀ ಅವಶ್ಯಕ. ಆದ್ದರಿಂದ ಆರೋಗ್ಯಕರ ಪರಿಸರಕ್ಕೆ ಗಿಡ-ಮರಗಳು ಅವಶ್ಯಕ.ಪ್ರತಿಯೊಬ್ಬರೂ ಸಸಿಗಳನ್ನು ನೆಡಲು ಮುಂದಾಗಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಹೊನ್ನಜ್ಜೆರ, ಯೋಗ ತರಬೇತುದಾರರಾದ ಸುಂದರ ಕುಲಕರ್ಣಿ,ಸಿಬ್ಬಂದಿಗಳು,ಸಹಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.