ಮಾರುಕಟ್ಟೆ ಬಂಡವಾಳೀಕರಣ ಹೆಚ್ ಡಿ ಎಫ್ ಸಿ ಬ್ಯಾಂಕ್ ಸಾಧನೆ

ಮುಂಬೈ,  ನ 15  :     ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತೊಂದು ಸಾಧನೆಯನ್ನು  ತನ್ನ ಮುಡಿಗೇರಿಸಿಮೊಂಡಿದೆ.

ಮಾರುಕಟ್ಟೆ  ಬಂಡವಾಳೀಕರಣ  ವಿಷಯದಲ್ಲಿ     ಹೆಚ್ ಡಿ ಎಫ್  ಸಿ  ದೇಶದ  ಮೂರನೇ ಅತಿದೊಡ್ಡ   ಸಂಸ್ಥೆಯಾಗಿದೆ. 7 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು    ಬ್ಯಾಂಕ್ ಮೀರಿದೆ.   

ರಿಲಯನ್ಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್   ನಂತರದ ಮೂರನೇ ಭಾರತೀಯ  ಸಂಸ್ಥೆ  ಎಂಬ   ಹೆಗ್ಗಳಿಕೆ  ಪಡದುಕೊಂಡಿದೆ.  ಅಲ್ಲದೆ,  ಈ ಸಾಧನೆ ಮಾಡಿದ ಮೊದಲ ಬ್ಯಾಂಕ್ ಎಂಬ  ಗೌರವಕ್ಕೂ ಪಾತ್ರವಾಗಿದೆ.  

 ಇಲ್ಲಿಯವರೆಗೆ, ರಿಲಯನ್ಸ್ ಇಂಡಸ್ಟ್ರೀಸ್ ( ಆರ್ ಐ  ಲ್) ಮತ್ತು ಟಿಸಿಎಸ್    ಸಂಸ್ಥೆಗಳು  ಮಾತ್ರ ಈ ಮೈಲಿಗಲ್ಲು ಸಾಧಿಸಿದ್ದವು.  9.38 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ, ಆರ್ಐಎಲ್  ಕಂಪನಿ  ಮೊದಲ ಸ್ಥಾನದಲ್ಲಿದ್ದು, 8.28 ಲಕ್ಷ ಕೋಟಿ ರೂ  ಬಂಡವಾಳೀಕರಣದೊಂದಿಗೆ ಟಿಸಿಎಸ್ ಎರಡನೇ  ಸ್ಥಾನದಲ್ಲಿದೆ.  ಎಚ್ಡಿಎಫ್ಸಿ ಬ್ಯಾಂಕಿನ ಮಾರುಕಟ್ಟೆ ಬಂಡವಾಳೀಕರಣ  ಮೊದಲ ಬಾರಿಗೆ 7,01,730.21 (7.01 ಲಕ್ಷ ಕೋಟಿ)  ದಾಟಿದೆ.