ಲಾಹೋರ್,ಅ 4: ಕೌಟುಂಬಿಕ ಜವಾಬ್ದಾರಿಯಿಂದಾಗಿ ಮಾರ್ಕ್ ಕೋಲ್ಸ್ ಅವರು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹೆುದ್ದೆಯಿಂದ ಕೆಳಗೆ ಇಳಿದಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ವರೆಗೂ ಮಾರ್ಕ್ ಕೋಲ್ಸ್ ಅವರ ಮುಖ್ಯ ಕೋಚ್ ಹೆದ್ದೆಯ ಗುತ್ತಿಗೆ ಅವಧಿ ಇತ್ತು. ಆದರೆ, ಅವರು ಇದೀಗ ತಮ್ಮ ಮುಖ್ಯ ಕೋಚ್ ಹೆದ್ದೆಯನ್ನು ತ್ಯಜಿಸಿ ತಮ್ಮ ನ್ಯೂಜಿಲೆಂಡ್ಗೆ ಮರಳಲಿದ್ದಾರೆ. ಬ್ಯಾಟಿಂಗ್ ಕೋಚ್ ಆಗಿದ್ದ ಇಕ್ಬಾಲ್ ಇಮಾಮ್ ಅವರು ಹಂಗಾಮಿ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಪಾಕಿಸ್ತಾನ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಅವಧಿ ಅತ್ಯುತ್ತಮವಾಗಿತ್ತು. ಆದರೆ, ತಮ್ಮ ಕುಟುಂಬದ ಜವಾಬ್ದಾರಿಯಿಂದಾಗಿ ತಮ್ಮ ಹೆುದ್ದೆಯಿಂದ ಕೆಳಗೆ ಇಳಿಯುತ್ತಿದ್ದೇನೆ ಎಂದು ಮಾರ್ಕ್ ಕೋಲ್ಸ್ ಹೇಳಿದ್ದಾರೆ.