ಕಾರವಾರದಲ್ಲಿ 18 ರಿಂದ 22 ರವರೆಗೆ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ಕಡಲ ಉತ್ಸವ
ಕಾರವಾರ 05: ಸ್ಟಾರ್ ಚಾಯ್ಸ್ ಕಲಾ ಕೇಂದ್ರ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲ ತೀರದಲ್ಲಿ ಕಡಲ ಉತ್ಸವ ಹಾಗೂ ಬೀಚ್ ಕಾರ್ನಿವಲ್ ಎನ್ನುವಂತಹ ಐದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಡಿಸೆಂಬರ್ 18 ರಿಂದ ಡಿಸೆಂಬರ್ 22ರ ವರೆಗೆ ನಡೆಸಲಾಗುವುದು ಎಂದು ಸ್ಟಾರ್ ಚಾಯ್ಸ ಸಂಸ್ಥಾಪಕ ಅಧ್ಯಕ್ಷ ರಾಜನ್ ಬಾನಾವಳಿಕರ್ ಹೇಳಿದರು.ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು ಕಡಲ ಉತ್ಸವದಲ್ಲಿ ಆಕರ್ಷಿತ ಅಮ್ಯೂ ಸ್ಮೆಂಟ್ ಪಾರ್ಕ್ ಮತ್ತು ಸ್ಟಾಲ್ ಗಳನ್ನು ಹಾಕಲಾಗುವುದು. ಡಿಸೆಂಬರ್ 18 ರಿಂದ ಡಿಸೆಂಬರ್ 22ರವರೆಗೆ ಮಯೂರವರ್ಮ ವೇದಿಕೆ ಮೇಲೆ ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು. ಯಕ್ಷಗಾನ, ಭರತನಾಟ್ಯ ರೂಪಕ ನೃತ್ಯ, ಡೊಳ್ಳು ಕುಣಿತ, ಜಾನಪದ ಉತ್ಸವ, ಬೆಂಗಳೂರು, ಮಹಾರಾಷ್ಟ್ರ, ಅವರಿಂದ ರಸಮಂಜರಿ ಕಾರ್ಯಕ್ರಮ ಸಂಗೀತ ಗಾಯದ ಸ್ಪರ್ಧೆ ಸೋನಿ ಟಿವಿ ಮತ್ತು ಜಿ ಟಿವಿಯ ಸರಿಗಮಪ ಇಂಡಿಯನ್ ಐಡಲ್ ಖ್ಯಾತ ಕಲಾವಿದರಿಂದ ಹಾಗೂ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಚಲನಚಿತ್ರ ಗಾಯಕರಿಂದ ಲೈವ್ ಬ್ಯಾಂಡ್ ಕಾರ್ಯಕ್ರಮ ಇದೆ. ಅಲ್ಲದೆ ಸ್ಥಳೀಯ ಕಲಾವಿದರಿಂದಲೂ ಕಲಾಪ್ರದರ್ಶನವನ್ನು ಏರಿ್ಡಸಲಾಗಿದೆ ಎಂದರು.ಡಿಸೆಂಬರ್ 21 ಶನಿವಾರದಂದು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ ಕಾರವಾರದಲ್ಲಿ ಪ್ರಥಮ ಬಾರಿಗೆ ಬೀಚ್ ಕಾರ್ನಿವಲ್ ಎನ್ನುವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಸಲಿದ್ದೇವೆ. ಡಿಸೆಂಬರ್ 21ರಂದು ಮಧ್ಯಾಹ್ನ 3:30 ರಿಂದ ಅದ್ದೂರಿ ಮೆರವಣಿಗೆ ಮುಖಾಂತರ ಜಿಲ್ಲಾ ರಂಗಮಂದಿರದ ಆವರಣದಿಂದ ರವೀಂದ್ರನಾಥ ಟ್ಯಾಗೋರ್ ಕಡಲತೀರದವರೆಗೆ ನಡೆಯಲಿದೆ.ಅಂದು ಕಡಲ ತೀರದಲ್ಲಿ ಗಾಳಿಪಟ ಉತ್ಸವ ಹಾಗೂ ನೂರಕ್ಕೂ ಹೆಚ್ಚು ಚೈನೀಸ್ ಲೆಂಟರ್ನ್ ಆಕಾಶಕ್ಕೆ ಹಾರಿಸಲಾಗುವುದು.ರಾತ್ರಿ ಸ್ಯಾಂಡಲ್ ವುಡ್ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ನಡೆಸಲಾಗುವುದು.ಡಿಸೆಂಬರ್ 22 ರವಿವಾರದಂದು ಬೆಳಿಗ್ಗೆ 7:00ಗೆ ಬೀಚ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಇವೆಲ್ಲ ಕಾರ್ಯಕ್ರಮವು ಪ್ರವಾಸೋದ್ಯಮ ಇಲಾಖೆ ಸಹಕಾರ ಇದೆ ಎಂದು ರಾಜನ್ ಹೇಳಿದರು.ಬೀಚ್ ಕಾರ್ನಿವಲ್ :ಬೀಚ್ ಕಾರ್ನಿವಲ್ ಹಾಗೂ ಕಡಲ ಉತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಚಾಲನೆಯನ್ನು ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಚಲನಚಿತ್ರದ ಗಾಯಕರು ಆಗಮಿಸುವರು. ಅದೇ ದಿನ ರಾತ್ರಿ 9:00ರಿಂದ ಬಾಲಿವುಡ್ ಚಲನಚಿತ್ರದ ಗಾಯಕರಿಂದ ಲೈವ್ ಬ್ಯಾಂಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜನ್ ಹೇಳಿದರು.