ಸಾಗರ ಹವಾಮನ ಮುನ್ಸೂಚನೆ ನೀಡುವ ಬಾಯ್ ಯಂತ್ರ ಲೈಟ್ ಹೌಸ್ ಸಮೀಪ ಮರು ಸ್ಥಾಪನೆ :

Marine weather forecast buoy re-installed near lighthouse:

ಸಾಗರ ಹವಾಮನ ಮುನ್ಸೂಚನೆ ನೀಡುವ ಬಾಯ್ ಯಂತ್ರ ಲೈಟ್ ಹೌಸ್ ಸಮೀಪ ಮರು ಸ್ಥಾಪನೆ : 

ಕಾರವಾರ  02 : ಸಾಗರ ಹವಾಮಾನ ಮುನ್ಸೂಚನೆ ನೀಡುವ ಬಾಯ್ ಯಂತ್ರ ಲೈಟ್ ಹೌಸ್ ಸಮೀಪ ಮರು ಸ್ಥಾಪನೆ ಮಾಡಲಾಗುತ್ತಿದೆ ಎಂದು ಕಾರವಾರ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಶೋಧಕ ಉಪನ್ಯಾಸಕ ಜೆ.ಎಲ್ .ರಾಠೊಡ್‌ ಹೇಳಿದರು.ಕಾರವಾರದ ಪತ್ರಿಕಾಭವನದಲ್ಲಿ ಅವರು ಬುಧುವಾರ ಸುದ್ದಿಗೋಷ್ಟಿ ಮಾಡಿ ಬೊಯ್ ಯಂತ್ರದ ಪ್ರಯೋಜನಗಳನ್ನು ಹಂಚಿಕೊಂಡರು .ಕಳೆದ ಫೆಬ್ರುವರಿ 2024 ಕಾರವಾರದಲ್ಲಿನ ಸಮುದ್ರದಿಂದ ಬೊಯ್ ಯಂತ್ರ ಕಳ್ಳತನವಾಗಿತ್ತು. ಅಂದಿನಿಂದ ಮೀನುಗಾರರಿಗೆ ಸಿಗುವ ಹವಾಮಾನ ಮಹಿತಿ ನಿಂತು ಹೋಗಿತ್ತು. ಕರ್ನಾಟಕ ವಿ.ವಿ. ಕುಲಪತಿ ಸಹಕಾರದಿಂದ ಈಗ ಮತ್ತೊಂದು ಬೋಯ್ ಯಂತ್ರವನ್ನು ಉತ್ತರ ಕನ್ನಡದ ಕಾರವಾರ ಕರಾವಳಿಯ ಲೈಟ್ ಹೌಸ್ ಬಳಿ ಸ್ಥಾಪಿಸಲಾಗುತ್ತಿದೆ. ಇದರಿಂದ ಜನರಿಗೆ ಮತ್ತು ಮುಖ್ಯವಾಗಿ ಮೀನುಗಾರರಿಗೆ ಸಹಕಾರಿ ಯಾಗಲಿದೆ ಎಂದು ಉಪನ್ಯಾಸಕ ರಾಠೋಡ್ ಹೇಳಿದರು.ಬೊಯ್ ಯಂತ್ರ ನಿರ್ವಹಣೆಯನ್ನುಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶನ್ ಇನ್ಪರ್ಮೇಶನ್ ಸರ್ವೀಸ್‌ನವರು ಕಾರವಾರ ಕಡಲ ಜೀವಶಾಸ್ತ್ರ ವಿಭಾಗದಲ್ಲಿರುವ ನನಗೆ ನೀಡಿದ್ದಾರೆಂದು ರಾಠೋಡ್ ಹೇಳಿದರು.ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾಟೆಂರ್ಟ್ ಮತ್ತು ಇನ್ಯಾಯ್ಡ್‌ ಈ ಎರಡು ಸಂಸ್ಥೆಗಳು ಜಂಟಿಯಾಗಿ ಬಾಯ್ ಯಂತ್ರದ ಮಾಹಿತಿ ಆಧರಿಸಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.ಬೊಯ್‌ ಯಂತ್ರವು ಮೀನುಗಾರರಿಗೆ ಮತ್ತು ಕರಾವಳಿ ತೀರದ ಜನರಿಗೆ ಮಾಹಿತಿಯನ್ನು ಒದಗಿಸುತ್ತದೆ ಎಂದರು.ಸಾಗರ ಹವಮಾನದ ಮುನ್ಸೂಚನೆ :ಬಾಯ್ ಯಂತ್ರ ಸಾಗರ ಹವಮಾನದ ಮುನ್ಸೂಚನೆನೀಡುತ್ತದೆ . ಅಲೆಗಳ ಎತ್ತರ ಅಲೆಗಳ ದಿಕ್ಕು ಮತ್ತು ವೇಗವನ್ನು ತಿಳಿಸುತ್ತದೆ. ವೈತಿರಿಕ್ತ ಹವಾಮಾನದ ಮುನ್ಸೂಚನ ನೀಡುತ್ತದೆ. ನಿರ್ದಿಷ್ಟ ಸ್ಥಳದ ಹವಾಮಾನದ ಮುನ್ಸೂಚನೆ ಸಹ ಈ ಯಂತ್ರ ದಿಂದ ಲಭ್ಯವಾಗುತ್ತದೆ. ಸಮುದ್ರದಲ್ಲಿ ಮೀನುಗಾರಿಕೆ ಹೆಚ್ಚಿನ ಸುರಕ್ಷತೆ ಸಹ ದೊರೆಯುತ್ತದೆ ಎಂದರು.ಪೊಟೆನ್ಶಿಯಲ್ ಫಿಶಿಂಗ್ ಝೇನ್ :ಸಂಭಾವ್ಯ ಮೀನುಗಾರಿಕೆಯ ಸ್ಥಳಗಳು, ಹೆಚ್ಚಿನ ಮೀನುಗಳ ಸಿಗುವ ಸಾಧ್ಯತೆಯನ್ನು ಬೊಯ್ ಯಂತ್ರ ನೀಡಲಿದೆ. ಇದರಿಂದ ಮೀನುಗಳನ್ನು ಸಮುದ್ರದಲ್ಲಿ ಹುಡುಕುವ ಸಮಯ ಕಡಿಮೆಯಾಗುವುದು. ಫಿಶ್ಶಿಂಗರ ಬೋಟುಗಳ ಇಂಧನ ಬಳಕೆ ಉಳಿತಾಯವಾಗಿ , ಸಮುದ್ರದಲ್ಲಿ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ ಎಂದರು.ಈ ಯಂತ್ರವನ್ನು 17 ರಿಂದ 20 ಮೀಟರ್ ಆಳವಿರುವ ಸ್ಥಳದಲ್ಲಿ , ಕಾರವಾರ ಸಮುದ್ರದ ಲೈಟ್ ಹೌಸ್ ಹತ್ತಿರದಲ್ಲಿ ಅಳವಡಿಸಲಾಗುವುದು. ಬೊಯ್‌ ಯಂತ್ರ ಜನರಿಗೆ ಉಚಿತವಾಗಿ ಮಾಹಿತಿಯನ್ನು ಒದಗಿಸುತ್ತದೆ. ಇದು ಸರ್ಕಾರದ ಒದಗಿಸಿದ ಯಂತ್ರವಾಗಿದ್ದು, ಇದಕ್ಕೆ ಯಾವುದೇ ರೀತಿಯ ಹಾನಿ ಆಗದಂತೆ ನೋಡಿಕೊಳ್ಳಬೇಕಾಗಿ ಮೀನುಗಾರರಲ್ಲಿ ಹಾಗೂ ಸಂಪ್ರದಾಯಿಕ ಬೋಟ್ ಮಾಲೀಕರನ್ನು ಅವರು ವಿನಂತಿಸಿದರು. ವಾಣಿಜ್ಯ ಹಡಗುಗಳಲ್ಲಿ ಕೆಲಸ ಮಾಡುವ, ಪರ ರಾಜ್ಯದಿಂದ ಬಂದ ಕಾರ್ಮಿಕರಿಗೂ ಬೊಯ್‌ ಕುರಿತು ಮಾಹಿತಿ ನೀಡಬೇಕಾಗಿ ಎಲ್ಲಾ ಬೋಟ್ ಮಾಲೀಕರಲ್ಲಿ ಜೆ.ಎಲ್‌.ರಾಠೊಡ್‌ ಮನವಿ ಮಾಡಿದರು.ಮುಂದಿನ ದಿನಗಳಲ್ಲಿ ಸ್ಪೀಸೀಸ್ ಸ್ಪೆಸಿಫಿಕ್ ಅಡ್ವೆಜರಿ ನಿರ್ದಿಷ್ಟ ಮೀನು ಲಭ್ಯದ ಕುರಿತು ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ ಎಂದ ಅವರು ಲಕ್ಷದ್ವೀಪ ಮತ್ತು ಕೇರಳದಲ್ಲಿ ಮೀನು ಸಿಗುವ ಸ್ಥಳದ ಮಾಹಿತಿ ಒದಗಿಸಲಾಗುತ್ತಿದೆ. ಇದೇ ರೀತಿ ಕರ್ನಾಟಕ ಕರಾವಳಿಯಲ್ಲಿ ಬಂಗುಡೆ ಮೀನು ಸಿಗುವ ಸ್ಥಳದ ಮಾಹಿತಿ ಒದಗಿಸುವ ಕಾರ್ಯವಾಗಲಿದೆ ಎಂದರು.ಬೊಯ್‌ ಯಂತ್ರವನ್ನು ಮತ್ತೆ ಕಾರವಾರಕ್ಕೆ ತರಲು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಎಸ್‌. ಜಯಶ್ರೀ ಹಾಗೂ ಕವಿವಿ ಕುಲಸಚಿವಡಾ. ಎ. ಚೆನ್ನಪ್ಪ ಸಹಕಾರ ನೀಡಿದ್ದಾರೆ ಎಂದು ರಾಠೋಡ್ ಹೇಳಿದರು.