ಪುತಿಯಾನ್ (ಚೈನಾ), 21 ಭಾರತದ ಸ್ಟಾರ್ ಮಹಿಳಾ ಶೂಟರ್ ಮನು ಭಾಕರ್ ಮತ್ತೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಐಎಸ್ಎಸ್ಎಫ್ ವಿಶ್ವಕಪ್ ಭಾಗವಾಗಿ ಗುರುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯಾವಳಿಯಲ್ಲಿ ಮನು ಭಾಕರ್ ಸ್ವರ್ಣ ಪಡೆದರು. ಒಟ್ಟಾರೆ 244.7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗಳಿಸಿದರು. ಈ ವರ್ಷದ ವಿಶ್ವಕಪ್ ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲನೆಯ ಚಿನ್ನದ ಪದಕ. ಇದರ ಹೊರತಾಗಿಯೂ, ಮನು ಭಾಕರ್ ಚಿನ್ನದ ಪದಕ ಗಳಿಸಲು ಗಳಿಸಿದಸ್ಕೋರು ಕಿರಿಯರ ವಿಶ್ವ ದಾಖಲೆಯನ್ನು ಮುರಿದರು. ಮತ್ತೊಂದೆಡೆ, ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪಧರ್ೆಯಲ್ಲಿ ಹೀನಾ ಸಿಧು ನಂತರ ಚಿನ್ನದ ಪದಕ ಗಳಿಸಿದ ಎರಡನೇ ಭಾರತೀಯ ಶೂಟರ್ ಎನಿಸಿಕೊಂಡಿದ್ದಾರೆ. ಇನ್ನೂ ಸೆಬರ್ಿಯಾದ ಜೊರಾನಾ ಅರುನೋವಿಕ್ 241.9 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚೈನಾದ ಕಿಯಾನ್ ವಾಂಗ್ 221.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡರು. 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಭಾರತದ ಪುರುಷರ ಶೂಟರ್ಗಳಾದ ಅಭಿಷೇಕ್ ವಮರ್ಾ ಮತ್ತು ಸೌರವ್ ಚೌಧರಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ.