ಎಲುಬಿನ ಹಂದರದೊಳಗೆ ಮಂದಿರ ಮಸೀದಿ ಕಾಣುವ ಆಧುನಿಕ ಸಂತ ನಾದ ಮಣಿನಾಲ್ಕೂರು: ನಾಗರಾಜ ಹರಪನಹಳ್ಳಿ

ಲೋಕದರ್ಶನ ವರದಿ

ಕಾರವಾರ 03: ಎಲುಬಿನ ಹಂದರದೊಳಗೆ ಮಂದಿರ ಮಸೀದಿ ಕಾಣುವ ಆಧುನಿಕ ಸಂತ ನಾದ ಮಣಿನಾಲ್ಕೂರು ಎಂದು ತಾಲೂಕಾ ಕನ್ನಡ ಸಾಹಿತ್ಯ ಅಧ್ಯಕ್ಷ ನಾಗರಾಜ್ ಹರಪನಹಳ್ಳಿ ಅಭಿಪ್ರಾಯಪಟ್ಟರು. 

ಅವರು ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಕತ್ತಲೆ ಹಾಡು ಕಾರ್ಯಕ್ರಮದಲ್ಲಿ ಭಾಸ್ಕರ ಮಣಿನಾಲ್ಕೂರು ಅವರ ಕನರ್ಾಟಕ ಯಾತ್ರೆ ಕುರಿತು ಅಭಿಪ್ರಾಯ ಮಂಡಿಸಿದರು. ನಾದ ಮಣಿನಾಲ್ಕೂರು ಆಧುನಿಕ ಕವಿಗಳಾದ ಮೂಡಕೋಡು ಚಿನ್ನಸ್ವಾಮಿ, ಗಿರೀಶ್ ಹಂದಲಗೆರೆ , ಶ್ರೀನಿವಾಸ ಕಾರ್ಕಳ, ಅಬ್ರಾಹಂ ಲಿಂಕನ್, ಪ್ರಗತಿಪರ ಸ್ವಾಮಿ ನಿಡುಮಾಮಿಡಿ ಅವರ  ಕವಿತೆಯನ್ನು ಕತ್ತಲೆ ಹಾಡಿಗೆ ಆಯ್ದುಕೊಂಡರೂ, ಅವರ ಕವಿತೆಗಳಲ್ಲಿ ಕನ್ನಡ ಸಂಸ್ಕೃತಿಯ ಪರಂಪರೆಯ ಮುಂದುವರಿಕೆ ಹಾಸು ಹೊಕ್ಕಾಗಿದೆ. ಹಾಡುವ ಕವಿತೆಗಳು ವಚನಕಾರರ ಸಮಾಜಿಕ ಪರಿವರ್ತನೆಯ ವಚನಗಳ ಸಾರವನ್ನೇ ಮರು ಪ್ರತಿಷ್ಠಾಪಿಸುತ್ತಿವೆ. ಇದು ಆಶಾದಾಯಕ ಪಯಣ ಎಂದರು. ನಾದ ಅವರು ಇವೇ ಕವಿತೆಗಳನ್ನು ತೆಲುಗು,ತಮಿಳು,ಮಲಯಾಳಂಗೆ ಅನುವಾದಿಸಿಕೊಂಡು ಆ ರಾಜ್ಯಗಳಲ್ಲಿ ಸೌಹಾರ್ದ ಪರಂಪರೆಯನ್ನು ಸಾರಬೇಕು ಎಂದರು. 

ಎಲುಬಿನ ಹಂದರದೊಳಗೆ ಮಂದಿರದೊಳಗೊಂದು ಉಚ್ಛಾಸ ನಿಶ್ವಾಸಗಳ ಓಂಕಾರವಿದೆ, ಅಲ್ಲಿ ರಾಮ ನಿದ್ದಾನೆ, ಅಲ್ಲಿ ಅಲ್ಲಾ ಇದ್ದಾನೆ. ಅಲ್ಲಿ ಮಂದಿರವಿದೆ. ಮಸೀದಿಯಿದೆ, ಇಗಜರ್ಿ ಇದೆ. ಅಲ್ಲಿ  ಅಕ್ಕ ಇದ್ದಾಳೆ ,ಅಕ್ಕ ಮಹಾದೇವಿ ಇದ್ದಾಳೆ, ಅಲ್ಲಮನಿದ್ದಾನೆ, ಅಲ್ಲಿ ಅಣ್ಣನಿದ್ದಾನೆ.ಬಸವಣ್ಣ ನಿದ್ದಾನೆ ಎಂಬ ಹಾಡನ್ನು ನಾದ ಮಣಿನಾಲ್ಕೂರು ಅವರು ಮನದುಂಬಿ ತಂಬೂರಿ ಮೀಟುತ್ತಾ ಹಾಡಿದಾಗ ಪತ್ರಿಕಾ ಭವನದ ಸಂಭಾಗಣ ಮಂತ್ರಮುಗ್ಧ ಮೌನದಲ್ಲಿತ್ತು ಎಂದರು.

ಕಾರ್ಯಕ್ರಮವನ್ನು ಇಲ್ಲಿನ ಪತ್ರಿಕಾಭವನದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಂಘದವತಿಯಿಂದ ಆಯೋಜಿಸಿತ್ತು.  ಕತ್ತಲ ಹಾಡು ಕಾರ್ಯಕ್ರಮದಲ್ಲಿ ನಾದ ಮನದುಂಬಿ ಹಾಡಿದರು. ಅಬ್ರಹಾಂ ಲಿಂಕನ್ ತನ್ನ ಮಗನಿಗೆ ಬರೆದ ಪತ್ರದ ಸಾರಂಶವನ್ನೇ ಕವಿತೆ ಮಾಡಿ ಹಾಡಿದರು. ಸೋಲುವುದನ್ನು ಕಲಿಸು, ಸುಳ್ಳಾಡುವವರ ಮಧ್ಯೆ ಸತ್ಯ ಹೇಳುವುದ ಕಲಿಸು ಎಂಬ ಕವಿತೆ ಹಾಡಿದಾಗ ಪ್ರೇಕ್ಷಕರ ಚಪ್ಪಾಳೆ ತಟ್ಟಿದರು. ಮೂಡಕೋಡು ಚಿನ್ನಸ್ವಾಮಿ ಅವರ ಎಲುಬಿನ ಹಂದರದೊಳಗೆ, ನಿಡುಮಾಮಿಡಿ ಸ್ವಾಮಿ ಒಂದೇ ಭೂಮಿಯ ಮೇಲೆ ದೇವಾಲಯವಿದೆ, ಕಾಬಾವೂ ಇದೆ ಕವಿತೆ,  ತುಮಕೂರಿನ ಕೃಷ್ಣಮೂತರ್ಿ, ಶ್ರೀನಿವಾಸ ಕಾರ್ಕಳ,ಗಿರೀಶ್ ಹಂದಲಗೆರೆ ಅವರ ಕವಿತೆಗಳನ್ನು ನಾದ ಹಾಡಿದರು.

ಯಕ್ಷಗಾನದ ಭಾಗವತಿಕೆಯನ್ನು ಬಿಟ್ಟ ಕಾರಣವನ್ನು ವಿವರಿಸಿದ ಅವರು ಯಕ್ಷಾಗಾನದಲ್ಲಿ ತಾರತಮ್ಯ, ಅಸ್ಪೃಶ್ಯತೆ ಮತ್ತು ವ್ಯವಸ್ಥೆಯನ್ನು ಇದ್ದಕ್ಕಿಂತದ್ದಂತೆ ಪ್ರತಿಪಾದಿಸುವ ಸ್ಥಗಿತತೆ ಯಕ್ಷಗಾನದಲ್ಲಿದೆ ಎಂದರು. ದೇವರು ಧರ್ಮಗಳು ಮನುಷ್ಯರನ್ನು ಗೊಂದಲಕ್ಕೆ ಕೆಡವಿವೆ. ಮಂಗಳ ಗ್ರಹಕ್ಕೆ ಹಾರಿದರೂ, ಮೌಢ್ಯ, ಜಾತಿಯತೆ ಬಿಟ್ಟಿಲ್ಲ. ವಿದ್ಯಾಥರ್ಿಗಳಿಗೆ ಕಲಿಸುವ ಉಪನ್ಯಾಸಕಿಯೋರ್ವರು ಮುಟ್ಟನ್ನು ಮೈಲಿಗೆ ಎಂದು ಭಾವಿಸುವ ಕಾಲದಲ್ಲಿ ಇದ್ದೇವೆ. ಚಲನೆಯಲ್ಲಿ ಇದ್ದರೂ ನಿಂತಲ್ಲೇ ನಿಂತಿರುವ ಸಮಾಜದ ಮೌನವನ್ನು ಹಾಗೂ ಸಾವುಗಳಿಗೆ ಸ್ಪಂದಿಸದ ಜಗತ್ತನ್ನು ಹಾಡಿನ ಮಧ್ಯೆ ಮಾತಿನಲ್ಲಿ ಬಿಡಿಸಿಟ್ಟರು ನಾದ. ಬೆಳಕಿನಷ್ಟೇ ಕತ್ತಲು ಮುಖ್ಯ, ಮೌನದಷ್ಟೇ ಮಾತು ಸಹ ಮುಖ್ಯ  ಎಂದ ನಾದ ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಸೂಕ್ಷ್ಮವನ್ನು ಪ್ರೇಕ್ಷಕರ ಎದುರಿಗಿಟ್ಟರು. 

ಕನರ್ಾಟಕವನ್ನು ತಂಬೂರಿ ಹಿಡಿದು 101 ಕಡೆ ಕಾರ್ಯಕ್ರಮ ನೀಡಿದ್ದೇನೆ. 23 ಜಿಲ್ಲೆ ಸುತ್ತಿದ್ದೇನೆ. ದಾಸ ಮತ್ತು ವಚನ ಪರಂಪರೆ ನಮ್ಮಲ್ಲಿದೆ. ಸೂಫಿಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ. ಅವರ ದಾರಿಯನ್ನು ಮುಂದುವರಿಸಿದ್ದೇನೆ ಎಂದರು. 

ಆರಂಭದಲ್ಲಿ ಕನ್ನಡ ಸಂಸ್ಖೃತಿ ಇಲಾಖೆಯ ಸಹಾಯಕ ನಿದರ್ೇಶಕ ಹಿಮಂತ ರಾಜು.ಜಿ. ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ಜರ್ನಲಿಸ್ಟ ಯುನಿಯನ್ ಅಧ್ಯಕ್ಷ ಮಂಜು ಕಡತೋಕ ಮುಖ್ಯ ಅತಿಥಿಯಾಗಿದ್ದರು. 

ಇದೇ ವೇಳೆ ನಾದ ಮಣಿನಾಲ್ಕೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಮನೋಜ್ ಕಾರ್ಯಕ್ರಮ ನಿರ್ವಹಿಸಿದರು. ಪರುಶುರಾಮ ಕೊನೆಯಲ್ಲಿ ವಂದಿಸಿದರು.