ಮಂಗಳೂರು: ಪ್ರಯಾಣಿಕರ ಕೊರತೆ ಹಲವು ವಿಮಾನಗಳ ಸಂಚಾರ ರದ್ದು

ಮಂಗಳೂರು, ಮೇ 24,ಲಾಕ್ ಡೌನ್  ಸಡಿಲಿಕೆ ಮಾಡಿ ಇಂದಿನಿಂದ ದೇಶೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದ್ದರೂ ಮಂಗಳೂರು  ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆ ಮತ್ತು ತಾಂತ್ರಿಕ ಕಾರಣಗಳಿಗಾಗಿ ಕೆಲವು ವಿಮಾನ ಸಂಚಾರವನ್ನು ರದ್ದುಪಡಿಲಾಗಿದೆ.ಮಂಗಳೂರು ವಿಮಾನ ನಿಲ್ದಾಣದಿಂದ ಇಂದು ಮುಂಬೈ ಮತ್ತು ಚೆನ್ನೈ ಹಾಗೂ ಬೆಂಗಳೂರಿಗೆ  ಹೊರಡುವ ಮತ್ತು ಬರಬೇಕಿದ್ದ  ಇಂಡಿಗೋ ಹಾಗೂ ಸ್ಪೈಸ್ ಜೆಟ್ನ ಆರು ವಿಮಾನಗಳ  ಸಂಚಾರ  ರದ್ದುಗೊಂಡಿವೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿಗದಿಯಾಗಿದ್ದ ಇಂಡಿಗೋದ ಮುಂಬೈ ವಿಮಾನ ಸಂಚಾರವೂ ಸಹ  ರದ್ದು ಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.