ಬೆಂಗಳೂರು,
ಮಾ.28, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಜನರಿಗೆ
ನಿರ್ಬಂಧವಿಧಿಸಿದ್ದರೂ, ಪ್ರತಿಭಟನೆ ಮುಂದಾದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ
ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ.ದೇವಸ್ಥಾನ,
ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಲು ಅವಕಾಶ ಕಲ್ಪಿ ಸಬೇಕೆಂದು
ಆಗ್ರಹಿಸಿ ಶನಿವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಾಗಿ
ವಾಟಾಳ್ ನಾಗರಾಜ್ ಪ್ರಕಟಿಸಿದ್ದರು.ಈ ಬಗ್ಗೆ ಮಾಹಿತಿ ಪಡೆದ ಸದಾಶಿವನಗರ ಠಾಣಾ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಗೃಹ ಬಂಧನದಲ್ಲಿರಿಸಿದರು.ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ ವಾಟಾಳ್ ನಾಗರಾಜ್,ಸಾರ್ವಜನಿಕರಲ್ಲದೇ
ಹೋದರೂ ಅರ್ಚಕರು, ಮೌಲ್ವಿಗಳು, ಪಾದ್ರಿಗಳಿಗೆ ಅವಕಾಶ ಮಾಡಿ ಕೊಡಬೇಕು. ಈ ಬಗ್ಗೆ
ಚಿಂತಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿರ್ಧಾರ ಪ್ರಕಟಿಸಬೇಕೆಂದು
ಒತ್ತಾಯಿಸಿದರು.