ಯಶಸ್ವಿಯಾಗಿ ಮುಕ್ತಾಯಗೊಂಡ ಮಣಗುತ್ತಿ ಬಸವೇಶ್ವರ ಜಾತ್ರೆ

Managutti Basaveshwar Jatra successfully concluded

ಯಮಕನಮರಡಿ 05: ಸಮೀಪದ ಮಣಗುತ್ತಿ ಗ್ರಾಮದ ಆರಾಧ್ಯ ದೈವ ಮುತ್ಯೆಪ್ಪಜ್ಜ ಇವರ ಕೃಪಾಶಿರ್ವಾದದಿಂದ ಪ್ರತಿ ವರ್ಷದ ಪದ್ಧತಿಯಂತೆ ದಿ. 1 ರಿಂದ ಪ್ರಾರಂಭವಾಗಿ ದಿ 4 ರವರೆಗೆ ಲಕ್ಷ್ಮೀ ದೇವಿ ಪಲ್ಲಕ್ಕಿ ಒಯ್ಯುವುದು, ಭಜನೆ, ಡೋಳ್ಳಿನ ಪದ, ಭವಿಷ್ಯವಾಣಿ, ಬಸವೇಶ್ವರ ದೇವರಿಗೆ ಅಭಿಷೆಕ, ಮಹಾಪ್ರಸಾದ ಹಾಗೂ ಮಂಗಳವಾರ ದಿ 4 ರಂದು ಜೋಡೆತ್ತಿನ ಗಾಡಿ ಶರ್ಯತ್ತು ಕುದುರೆ ಗಾಡಿ ಶರ್ಯತ್ತು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೀರಣ ಸಿಂಗ ರಜಪೂತ ಕಾಂಗ್ರೇಸ ಮುಖಂಡರು ಯಮಕನಮರಡಿ ಸುರೇಶ ಭೆಣ್ಣಿ ದಯಾನಂದ ಪಾಟೀಲ, ಬಸವರಾಜ ಧರನಟ್ಟಿ, ಕಾಡೇಶ ಮೇಕಲಿ, ಭೀಮಶಿ ಪೂಜೇರಿ, ನಿಂಗಪ್ಪಾ ಮಾಸ್ತಿಹೋಳಿ ವಸಂತ ಐಹೋಳೆ, ವಿಠ್ಠಲ ಉಕ್ಕೋಜಿ, ಬಾಳಪ್ಪಾ ಗಡದಿ, ಉತ್ತಮ ಬೇವಿನಗಿಡದ, ಸತ್ಯಪ್ಪಾ ಶಿವನಾಯಿಕ ಗಾ ಪಂ ಸ, ರಮೇಶ ಪಾಟೀಲ ಗಾ ಪಂ ಸ, ಮಹಾದೇವ ಝೀಪ್ರಪಾಟೀಲ, ರಾಮಕೃಷ್ಣ ಮಹಾನಿಂಗ ಶಿವನಾಯ್ಕ, ಬಸ್ಸಪ್ಪಾ ಮಾಸ್ತಿಹೋಳಿ, ಬಸಪ್ಪಾ ರಾ ವೆಂಕಟಾಪುರ, ಅಶೋಕ ಗಡದಿ, ರಾಜು ಈರಾ​‍್ಪ ಬೆಣ್ಣಿ, ಹಾಗೂ ಬಸವೇಶ್ವರ ಯಾತ್ರಾ ಕಮೀಟಿ ಸರ್ವ ಸದಸ್ಯರು ಉಪಸ್ಥಿತರಿದ್ದರು.