ಬೆಂಗಳೂರು, ಏ.1 , ಕೊರೊನಾವೈರಸ್ ಭೀತಿ ಉಲ್ಬಣಗೊಳ್ಳುತ್ತಿರುವುದನ್ನೇ ದುರ್ಬಳಕೆ ಮಾಡಿಕೊಂಡು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಥರ್ಮಾಮೀಟರ್ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಆರೋಪಿ ನಾರಾಯಣ್, ಇನ್ಫ್ರಾರೆಡ್ ಪೋರ್ಹೆಡ್ ಥರ್ಮಾಮೀಟರ್ಗಳನ್ನು ಚೆನ್ನೈನಿಂದ ತರಿಸಿಕೊಂಡು ರಾಜಾಜಿ ನಗರದ ತನ್ನ ಸರ್ಜಿಕಲ್ ಮತ್ತು ಸೈಂಟಿಫಿಕ್ಸ್ ಅಂಗಡಿಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.ಬಂಧಿತನಿಂದ 8 ಲಕ್ಷ ರೂ ಮೌಲ್ಯದ 70 ಥರ್ಮಾಮೀಟರ್ಗಳು ಹಾಗೂ ಅದಕ್ಕೆ ಸಂಬಂಧಿಸಿದ 60 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.