ಮಮತಾ ಕಾರ್ಯ ಶೈಲಿ ವಿರುದ್ದ ಗುಡುಗಿದ ರಾಜ್ಯಪಾಲ

ಕೋಲ್ಕತಾ, ನವೆಂಬರ್ 4:      ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು. ರಾಜ್ಯಪಾಲ ಜಗದೀಪ್ ಧಂಕರ್  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಯ  ಬಗ್ಗೆ ಅಸಮಾಧಾನ  ಹೊರಹಾಕಿದ್ದಾರೆ  ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ಮಿಗಳು.  ಪೊಲೀಸ್ ಸಿಬ್ಬಂದಿಯನ್ನೇ  ಗುಂಡಿಕ್ಕಿ ಕೊಂದಿರುವ ಘಟನೆ   ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಅವರು ಹೇಳಿದ್ದು  ಇದರ ಬಗ್ಗೆ ಮುಖ್ಯಮಂತ್ರಿಯವರು   ಕೂಡಲೇ ಕ್ರಮ ಜರುಗಿಸಬೇಕು ಎಂದೂ  ಆಗ್ರಹ ಪಡಿಸಿದ್ದಾರೆ . ಉತ್ತರ 24 ಜಿಲ್ಲೆಯ ಸಂದೇಶ್ಖಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖುಲ್ನಾ ಗ್ರಾಮಕ್ಕೆ ಪ್ರವೇಶಿಸಿದ ನಂತರ ಶುಕ್ರವಾರ ರಾತ್ರಿ ಗ್ರಾಮ ಪೊಲೀಸ್ ಸಿಬ್ಬಂದಿ ಬಿಸ್ವಾಜಿತ್ ಮೈಟಿ, ಸಬ್ ಇನ್ಸ್ಪೆಕ್ಟರ್ ಅರಿಂದಮ್ ಹಲ್ದಾರ್ ಅವರನ್ನು  ಸುತ್ತುವರಿದು ದುಷ್ಕಮರ್ಿಗಳು  ಗುಂಡು ಹಾರಿಸಿದ್ದಾರೆ. ನಂತರ ತೀವ್ರವಾಗಿ ಗಾಯಗೊಂಡ ಪೊಲೀಸ್ ಸಿಬ್ಬಂದಿ  ಮೈಟಿ (26) ಶನಿವಾರ  ಸಾವನ್ನಪ್ಪಿದ್ದರೆ, ಹಲ್ದಾರ್ ಮತ್ತು ಸಿನ್ಹಾ ಅವರ ಸ್ಥಿತಿ ಗಂಭೀರವಾಗಿದೆ ಎಂದೂ  ಹೇಳಲಾಗಿದೆ. ಪೊಲೀಸರ ಹತ್ಯೆಗೆ ಬಲವಾದ ಆಕ್ಷೇಪ  ವ್ಯಕ್ತಪಡಿಸಿರುವ ರಾಜ್ಯಪಾಲರು ಇದರ ಬಗ್ಗೆ ಸಮಗ್ರ  ತನಿಖೆ ನಡೆಯಬೇಕು  ಎಂದು ಹೇಳಿದ್ದಾರೆ.