ಬೆಂಗಳೂರು, ಜೂನ್ 6, ಕೊರೋನ ಸಂಕಷ್ಟದ ಕಾರಣ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಯುವಕ- ಯುವತಿಯರ ಆಕರ್ಷಣೆಯಾಗಿರುವ ಸಿಲಿಕಾನ್ ಸಿಟಿಯ ಮಾಲ್ ಗಳು ಎರಡು ತಿಂಗಳ ಬಳಿಕ ಸೋಮವಾರದಿಂದ ಪುನರಾರಂಭವಾಗಲು ಸಜ್ಜಾಗಿವೆ. ಆದರೆ ಕೇಂದ್ರದ ಮಾರ್ಗಸೂಚಿಯ ಕೆಲವು ಷರತ್ತುಗಳನ್ನು ಜನತೆ ಪೂರೈಸಬೇಕಿದೆ. ಮಾಸ್ಕ್, ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿರಬೇಕು, ಎಲ್ಲೆಡೆ ಸಾಮಾಜಿಕ ಅಂತರ ಇರಬೇಕು, ಇದರ ನಿಗಾಕ್ಕೆ ಅಗತ್ಯ ಸಿಬ್ಬಂದಿ ನೇಮಿಸಿರಬೇಕು. ಸಾಮಾಜಿಕ ಅಂತರಕ್ಕಾಗಿ ಮಾರ್ಕಿಂಗ್, ಪ್ರವೇಶ, ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಕಲ್ಪಿಸಿ ಅಂಗಡಿಗಳ ಒಳಗೆ ಸಾಧ್ಯವಾದಷ್ಟು ಕಡಿಮೆ ಗ್ರಾಹಕರಿರುವಂತೆ ನಿಗಾ ಲಿಫ್ಟ್ ನಲ್ಲೂ ಅಂತರವಿರಬೇಕು.
ಎಸ್ಕಲೇಟರ್ ಪ್ರತಿ ಎರಡು ಮೆಟ್ಟಿಲಿಗೆ ಒಬ್ಬರು ನಿಲ್ಲಬೇಕು, ಎಸಿ ತಾಪಮಾನ 24 ರಿಂದ 30 ಡಿಗ್ರಿ ಇರಬೇಕು, ಶುದ್ಧ ಗಾಳಿ ಒಳಗೆ ಬರುವಂತೆ ಇರಬೇಕು ಎಂದು ಸೂಚಿಸಲಾಗಿದೆ.ಭಾರಿ ಸಂಖ್ಯೆಯಲ್ಲಿ ಜನ ಸೇರಕೂಡದು, ಎಲ್ಲೆಡೆ ನೈರ್ಮಲ್ಯ ಕಾಪಾಡಬೇಕು, ಫುಡ್ ಕೋರ್ಟ್ ರೆಸ್ಟೋರೆಂಟ್ ಗಳಲ್ಲಿ, ಶೇಕಡ 50ಕ್ಕಿಂತ ಕ್ಕಿಂತ ಹೆಚ್ಚಿಗೆ ಜನರು ಇರುವಂತಿಲ್ಲ.ಕ್ಯಾಶ್ ಬದಲು ಡಿಜಿಟಲ್ ಪಾವತಿ ಸೇವೆಗೆ ಹೆಚ್ಚಿನ ಆದ್ಯತೆ, ಗೇಮ್ ಮತ್ತು ಮಕ್ಕಳ ಆಟದ ಸ್ಥಳಗಳು ಮಾಲ್ ಒಳಗಿನ ಮಲ್ಟಿಪ್ಲೆಕ್ಸ್ ಗಳಿಗೆ ಅವಕಾಶ ನೀಡಲಾಗಿಲ್ಲ.ಎಸ್ಕಲೇಟರ್ ಹಾಗೂ ಲಿಫ್ಟ್ ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 65 ವರ್ಷದ ಮೇಲ್ಪಟ್ಟು ಹತ್ತು ವರ್ಷದ ಒಳಗಿನ ಮಕ್ಕಳಿಗೆ ಮತ್ತು ಗರ್ಬೀಣಿ ಯರಿಗೆ ಮಾಲ್ ಒಳಗೆ ಅವಕಾವಿಲ್ಲ ಮೇಲಾಗಿ ಆರೋಗ್ಯ ಸೇತು ಆ್ಯಪ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.