ಶಬರಿಮಲೈಗೆ ಹೊರಟಿದ ಮಾಲಾಧಾರಿಗಳು ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಓರ್ವ ಸಾವು: ಹಲವುರಿಗೆ ಗಾಯ

Maladharis heading to Sabarimala meet in horrific road accident: One dies on the spot, many injured

ಲೋಕದರ್ಶನ ವರದಿ 

ಶಬರಿಮಲೈಗೆ ಹೊರಟಿದ ಮಾಲಾಧಾರಿಗಳು ಭೀಕರ ರಸ್ತೆ ಅಪಘಾತ:  ಸ್ಥಳದಲ್ಲೇ ಓರ್ವ ಸಾವು: ಹಲವುರಿಗೆ ಗಾಯ 

ಹಾನಗಲ್  17:  ಕೇರಳದ ಕೊಟ್ಟಾಯಂನ ಏರುಮಲೈ ಬಳಿ ಬುಧವಾರ ನಸುಕಿನ ಜಾವ ಬಸ್ ಉರುಳಿಬಿದ್ದು ಕುರುಬರ ಸಂಘದ ಜಿಲ್ಲಾಧ್ಯಕ್ಷ, ಹಾನಗಲ್ ನಗರದ ಮಾರುತಿ ಹರಿಹರ ಸ್ಥಳದಲ್ಲೇ ಮೃತಪಟ್ಟು ಹಲವು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಗಾಯಗೊಂಡವರನ್ನುಕೊಟ್ಟಾಯಂಜಿಲ್ಲಾಸ್ಪತ್ರೆಗೆದಾಖಲಿಸಲಾಗಿತ್ತು. ಇಲ್ಲಿನ ಕಲ್ಲಹಕ್ಕಲ, ಕಮಾಟಗೇರಿ ಓಣಿಯ ಶಿವಮಣಿ ಅಯ್ಯಪ್ಪಸ್ವಾಮಿ ಸನ್ನಿಧಾನದಿಂದ ಮಾಲಾಧಾರಿಗಳು ಶಬರಿಮಲೈ ವಿಶ್ವಪೂಜೆದರ್ಶನಕ್ಕಾಗಿ ಯಾತ್ರೆ ಆರಂಭಿಸಿದ್ದರು. ಮಾರ್ಗ ಮಧ್ಯೆ ನಾನಾ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಶಬರಿಮಲೈಯತ್ತ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. 

ಅಪಘಾತದ ವಿಷಯ ತಿಳಿದ ತಕ್ಷಣವೇ ಶಾಸಕ ಶ್ರೀನಿವಾಸ ಮಾನೆಅವರು ಮುಖ್ಯಮಂತ್ರಿಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಸಂಪರ್ಕಿಸಿ ಘಟನೆಕುರಿತು ಮಾಹಿತಿ ನೀಡಿ ಕೇರಳ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪಾರ್ಥಿವ ಶರೀರತರಲು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಮಾಡಿದ್ದರು.ಅಲ್ಲದೇಐವರು ಮುಖಂಡರು, ಇಬ್ಬರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕೇರಳದ ಕೊಚ್ಚಿನ್‌ಗೆ ವಿಮಾನದ ಮೂಲಕ ಕಳುಹಿಸಿಕೊಟ್ಟಿದ್ದರು. 

ಬುಧವಾರ ಸಂಜೆ ಹೊತ್ತಿಗೆಕೊಚ್ಚಿನ್‌ಅಂತರಾಷ್ಟ್ರೀಯ ವಿಮಾನ ನಿಲ್ದಾಣತಲುಪಿದ್ದಟೀಂಆಪತ್ಬಾಂಧವರಸ್ತೆ ಮೂಲಕ ಪ್ರಯಾಣ ಮುಂದುವರೆಸಿ ಕೆಲ ಸಮಯದಲ್ಲಿಯೇಕೊಟ್ಟಾಯಂಜಿಲ್ಲಾಸ್ಪತ್ರೆತಲುಪಿದ ಬಳಿಕ ಗಾಯಾಳುಗಳು ನಿಟ್ಟುಸಿರು ಬಿಟ್ಟರು. ಭಾಷೆಗೊತ್ತಿಲ್ಲದಜಾಗದಲ್ಲಿಅಪಘಾತಕ್ಕೀಡಾಗೀತೀವ್ರಆತಂಕದಲ್ಲಿದ್ದ ಗಾಯಾಳುಗಳು ಟೀಂಆಪತ್ಬಾಂಧವದ ಸದಸ್ಯರನ್ನುಕಂಡೊಡನೆ ಮಂದಹಾಸ ಬೀರಿದರು. 

ಬುಧವಾರರಾತ್ರಿ 11 ಗಂಟೆ ಹೊತ್ತಿಗೆ ಮಾರುತಿ ಹರಿಹರಅವರ ಶವದ ಮರಣೋತ್ತರ ಪರೀಕ್ಷೆಯಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರತ್ಯೇಕಅಂಬ್ಯುಲೆನ್ಸ್‌ ಮೂಲಕ ಪಾರ್ಥಿವ ಶರೀರವನ್ನು ಹಾನಗಲ್‌ಗೆತರುವ ವ್ಯವಸ್ಥೆ ಮಾಡಲಾಯಿತು. ಅಲ್ಲದೇ ಗಾಯಾಳುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ ಕೊಟ್ಟಾಯಂನಿಂದ ಹಾನಗಲ್‌ನತ್ತ ಪ್ರಯಾಣಆರಂಭಿಸಲಾಯಿತು. 

ಸಮುಯ ಸ್ಪೂರ್ತಿ ಮೆರೆದು ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ದೌಡಾಯಿಸಿ ಸಂಕಷ್ಟಕ್ಕೀಡಾದವರ ನೆರವಿಗೆ ನಿಂತು ನಿಜವಾದಅರ್ಥದಲ್ಲಿಆಪತ್ಬಾಂಧವ ಎನಿಸಿದರು.ಶಾಸಕ ಶ್ರೀನಿವಾಸ ಮಾನೆ ಗಾಯಾಳುಗಳಿಗೆ ಸಕಾಲಿಕವಾಗಿ ಚಿಕಿತ್ಸೆ ದೊರಕಿಸಿ, ಸ್ಥಳಕ್ಕೆ ತಂಡ ಕಳುಹಿಸಿಆತ್ಮಸ್ಥೈರ್ಯ ಮೂಡಿಸಿ, ಪಾರ್ಥಿವ ಶರೀರದಜೊತೆಗೆಎಲ್ಲ ಗಾಯಾಳುಗಳನ್ನು ಮರಳಿ ತವರಿಗೆಕರೆತರುವವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದುಇಡೀರಾಜ್ಯದ ಗಮನ ಸೆಳೆದಿದೆ. 


- ಬಾಕ್ಸ್‌ 

ಘಟನೆ ಮನಸ್ಸಿಗೆ ಬಹಳ ಬೇಸರ ತರಿಸಿದೆ.ಮೃತಪಟ್ಟ ಮಾರುತಿ ಹರಿಹರಅವರ ಪಾರ್ಥಿವ ಶರೀರತರಲು ಹಾಗೂ ಗಾಯಾಳುಗಳ ನೆರವಿಗೆಧಾವಿಸಲು ತಂಡವೊಂದನ್ನು ವಿಮಾನದ ಮೂಲಕ ಕೇರಳಕ್ಕೆ ಕಳುಹಿಸಲಾಗಿತ್ತು. 

- ಶ್ರೀನಿವಾಸ ಮಾನೆ, ಶಾಸಕ