'ಕುರುಕ್ಷೇತ್ರ'ದಂತಹ ಚಿತ್ರ ನಿರ್ಮಾಣಕ್ಕೆ ಎಂಟೆದೆ ಬೇಕು: ದರ್ಶನ್

ಬೆಂಗಳೂರು, ಆ 06  ಕುರುಕ್ಷೇತ್ರದಂತಹ ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳೆಂದರೆ ಕೈಯ್ಯಲ್ಲಿರುವ ಚಿತ್ರಗಳನ್ನೂ ಬಿಟ್ಟು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್   

 'ಕುರುಕ್ಷೇತ್ರ' ಚಿತ್ರದ ತುಣುಕುಗಳ ಪ್ರದರ್ಶನದ ವೇಳೆ ಮಾತನಾಡಿ, ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳೆಂದರೆ ಅಚ್ಚುಮೆಚ್ಚು  ಒಂದು ವೇಳೆ ಬೇರೆ ಚಿತ್ರಗಳಿದ್ದರೂ ಕ್ಯೂ ಜಂಪ್ ಮಾಡಿ, ಅಂತಹ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ ಆದರೆ ಅಂತಹ ಚಿತ್ರಗಳನ್ನು ನಿರ್ಮಿಸಲು ಎಂಟೆದೆಯ ಗಟ್ಟಿ ನಿರ್ಮಾಪಕರೇ ಬೇಕು ಎಂದರು 

 ಸುಯೋಧನ ದುರ್ಯೋಧನನಾಗಿ ಬದಲಾಗಿದ್ದು ಹೇಗೆ ಎಂಬುದು ಚಿತ್ರದ ತಿರುಳು  ಇದಕ್ಕಾಗಿ ಹೈದರಾಬಾದ್ ನಲ್ಲಿ ಈ ಹಿಂದೆ ಎನ್ ಟಿ ರಾಮರಾಜ್ ಕೃಷ್ಣ, ರಾಮನಾಗಿ ಬಣ್ಣ ಹಚ್ಚಿ ಅಭಿನಯಿಸಿದ್ದ ಸೆಟ್ ನಲ್ಲಿ ಚಿತ್ರೀಕರಿಸಲಾಯಿತು  70 ಕೆಜಿಗೂ ಅಧಿಕ ಭಾರ ಹೊತ್ತು ಅಭಿನಯಿಸುವುದು ನಿಜಕ್ಕೂ ಸವಾಲಾಗಿತ್ತು  ಮತ್ತೊಮ್ಮೆ ಇಂತಹ ಪಾತ್ರಗಳ ಕುರಿತು ಕನಸು ಕಾಣಲು ಸಾಧ್ಯವಿಲ್ಲ  ಏಕೆಂದರೆ ಇಂತಹ ಚಿತ್ರಗಳನ್ನು ತೆಗೆಯುವ ಕನಸು ಕಾಣಬೇಕಾದ್ದು ನಿರ್ಮಾಪಕರು ಎಂದು ಹೇಳಿದರು 

ಪಾಂಡವರಿಗೆ ಹೋಲಿಸಿದಲ್ಲಿ ದುರ್ಯೋಧನ ಖಳನಾಗಿ ಕಾಣುತ್ತಾನೆ ಆದಾಗ್ಯೂ, ನೆಗೆಟಿವ್ ರೋಲ್ ನಲ್ಲಿ ಅಭಿನಯಿಸಲು ಒಪ್ಪಿದ್ದೇಕೆ ಎಂಬ ಪ್ರಶ್ನೆಗೆ, ನೀವು ಮಹಾಭಾರತವನ್ನು ಪೂರ್ತಿ ಓದಿದರೆ ವಿಷಯ ಗೊತ್ತಿರುತ್ತದೆ   ಪಾಂಡವರ ಮಹಾಪ್ರಸ್ಥಾನದ ಬಳಿಕ ಸ್ವರ್ಗಕ್ಕೆ ಸಶರೀರಿಯಾಗಿ ಪ್ರವೇಶಿಸಿದ್ದು ಧರ್ಮರಾಯ ಹಾಗೂ ಒಂದು ಶ್ವಾನ  ಈ ವೇಳೆ ದುರ್ಯೋಧನ ಸ್ವರ್ಗದಲ್ಲಿರುತ್ತಾನೆ  ಕೃಷ್ಣ ದ್ವೇಷಿಯಾಗಿಯೇ ಸದಾ ಕೃಷ್ಣನನ್ನೇ ನೆನೆಯುತ್ತಿದ್ದುದರಿಂದ ಅವನಿಗೆ ಸ್ವರ್ಗ ಪ್ರಾಪ್ತಿಯಾಯಿತು ಎಂದು ಸಮಜಾಯಿಷಿ ನೀಡಿದರು 

ಇಂದಿನ ಪೀಳಿಗೆಯ ಮಕ್ಕಳಿಗೆ ಮಹಾಭಾರತ, ಭೀಮ, ಅರ್ಜುನ, ದುರ್ಯೋಧನ ಮೊದಲಾದ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ತಿಳಿದಿರುವುದಿಲ್ಲ  ಇಂತಹ ಸಂದರ್ಭದಲ್ಲಿ 'ಕುರುಕ್ಷೇತ್ರ'ದಂತಹ ಚಿತ್ರಗಳ ಅಗತ್ಯವಿದೆ ಇದು ನಿಜಕ್ಕೂ ಮುನಿರತ್ನ ಕುರುಕ್ಷೇತ್ರ, ಅವರೇ ಈ ಚಿತ್ರದ ಹೀರೋ ಎಂದು ಶ್ಲಾಘಿಸಿದರು 

ದುರ್ಯೋಧನನ ಪಟ್ಟದ ರಾಣಿ ಭಾನುಮತಿಯಾಗಿ ಅಭಿನಿಯಿಸಿರುವ ಮೇಘನಾ ರಾಜ್, ಮಹಾಭಾರತದಲ್ಲಿ ನೇಪಥ್ಯಕ್ಕೆ ಸರಿದ ಹಲವು ಸ್ತ್ರೀಯರಲ್ಲಿ ಭಾನುಮತಿಯೂ ಒಬ್ಬಳು  'ಕುರುಕ್ಷೇತ್ರ' ಚಿತ್ರದ ಮೂಲಕ ಆಕೆಯನ್ನು 6 ಸಾವಿರ ಕೋಟಿ ಕನ್ನಡಿಗರಿಗೆ ಪರಿಚಯಿಸಲಾಗುತ್ತಿದೆ   ಅಂತಹ ಪಾತ್ರ ಸಿಕ್ಕಿದ್ದು ಹೆಮ್ಮೆಯ ವಿಷಯ ಎಂದರು