ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿ: ಮುತ್ತಪ್ಪ ರೆಡ್ಡರ್

ಕೊಪ್ಪಳ 10: 75ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಸೇರಿಕೊಂಡು ಯಶಸ್ವಿಗೊಳಿಸುವಂತೆ ಉಪನಿರ್ದೇಶಕರಾದ ಮುತ್ತಪ್ಪ ಎಂ ರೆಡ್ಡರ್ ರವರು ಹೇಳಿದರು. 

ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಆ. 13ರಿಂದ 15 ರವರೆಗೆ ನಡೆಯುವ ಕಾರ್ಯಕ್ರಮದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಿಬ್ಬಂದಿಯವರಿಗೆ ದ್ವಜಗಳನ್ನು ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ನಮ್ಮ ದೇಶಕ್ಕೆ ಸ್ವತಂತ್ರ ದೊರೆತು 75ವರ್ಷಗಳು ಗತಿಸಿದ ಹಿನ್ನಲೆಯಲ್ಲಿ ಸರ್ಕಾರವು ಹರ್ ಘರ್ ತಿರಂಗ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಕೂಡ ದೇಶದ ಬಗ್ಗೆ ಹಾಗೂ ಸ್ವತಂತ್ರ ದಿನಾಚರಣೆಯ ಬಗ್ಗೆ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ವಿಶೇಷವಾಗಿ ಪ್ರತಿಯೊಬ್ಬರ ಮನೆಗಳ ಮೇಲೆ ದ್ವಜ ಹಾರಿಸುವ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು, ಗ್ರಾಮ ಪಂಚಾಯತ್, ನಗರಸಭೆ ಹಾಗೂ ಪುರಸಭೆ ಸೇರಿದಂತೆ ಅಂಚೆ ಕಚೇರಿಯಲ್ಲಿ ದ್ವಜಗಳು ಲಭ್ಯವಾಗುತ್ತಿದ್ದು ಅವುಗಳನ್ನು ಪಡೆದುಕೊಂಡು ನಿಯಾಮಾನುಸಾರ ದ್ವಜಾರೋಹಣ ಮಾಡಲು ತಿಳಿಸಿದರು.ಈ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಮೇಶ ಪೂಜಾರ, ದೈಹಿಕ ಶಿಕ್ಷಣಾಧಿಕಾರಿಗಳಾದ ಬಸವರಾಜ, ಕಛೇರಿ ವ್ಯವಸ್ಥಾಪಕರಾದ ಪದ್ಮನಾಭ ಮತ್ತು ಇತರೆ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.ಪೋಟೊ: ನಗರದ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಉಪನಿದರ್ೇಶಕರಾದ ಮುತ್ತಪ್ಪ ರೆಡ್ಡರ್ ರಾಷ್ಟ್ರದ್ವಜಗಳನ್ನು ಸಿಬ್ಬಂದಿಗಳಿಗೆ ವಿತರಿಸಿದರು