ಬಾಗಲಕೋಟೆ: ಸಂತ್ರಸ್ತರಿಗೆ ಒದಗಿಸುವ ಪರಿಹಾರ ಕಾರ್ಯದಲ್ಲಿ ಮಾನವೀಯತೆ ಅರಿತು ಸೇವೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಕವಿ ಮಾತು ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಕಾರ್ಯದಶರ್ಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಮತ್ತೆ ಪ್ರಾರಂಭವಾದ ಪ್ರವಾಹದಿಂದ ಉಂಟಾದ ಹಾನಿಗಳ ಮಾಹಿತಿ ಕುರಿತು ಜರುಗಿದ ವಿಡಿಯೋ ಸಂವಾದದ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಕಳೆದ ಆಗಸ್ಟ ಮಾಹೆಯಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಜಿಲ್ಲೆಗೆ ಬಂದೊದಗಿದೆ. ನೆರೆಯಿಂದ ಸಂಕಷ್ಟಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯದಲ್ಲಿ ಯಾರೊಬ್ಬರೂ ಬಟ್ಟು ಮಾಡಿ ತೋರಿಸದಂತೆ ಮಾದರಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕವಿ ಮಾತು ಹೇಳಿದರು.
ಪ್ರವಾಹದಿಂದ 7329 ಮನೆಗಳು, 154 ಶಾಲಾ ಕಟ್ಟಡಗಳು, 47 ಸಮುದಾಯ ಭವನಗಳು, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 144 ಅಂಗನವಾಡಿ ಕಟ್ಟಡಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಉತ್ತಮ ಬದುಕು ಕಟ್ಟಿಕೊಡಬೇಕಾಗಿದೆ. ವಿದ್ಯಾಥರ್ಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಾದರಿ ಶಾಲಾ ಕಟ್ಟಡ ನಿಮರ್ಿಸಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಿಮರ್ಿತಿ ಕೇಂದ್ರ, ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮಾನವೀಯ ಸೇವೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಂತ್ರಸ್ತರಿಗೆ ಒದಗಿಸುವ ಪರಿಹಾರದಲ್ಲಿ ಮಾನವೀಯ ಸೇವೆ ಅಗತ್ಯವಾಗಿದ್ದು, ಸಂತ್ರಸ್ತರ ಯಾವುದೇ ರೀತಿಯ ಶಾಪಗಳಿಗೆ ಒಳಗಾಗದಂತೆ ಪ್ರವಾಹ ಅನುದಾನದಡಿ ಅಧಿಕಾರಿಗಳು ನಿಯತ್ತಿನಿಂದ ಖಚರ್ು ಮಾಡಬೇಕು. ಸಂತ್ರಸ್ತರ ನೋವಿಗೆ ಮಾನವೀಯ ಸೇವೆ ಅಗತ್ಯವಾಗಿದೆ ಎಂದು ತಿಳಿಸಿದರು. ಪ್ರವಾಹ ಸಂತ್ರಸ್ತರಿಗೆ ಒದಗಿಸುವ ಮೂಲಭೂತ ಸೌಕರ್ಯಗಳಿಗಾಗಿ ಖಚರ್ು ವೆಚ್ಚಗಳನ್ನು ಅತೀ ಪ್ರಾಮಾಣಿಕವಾಗಿ ಯಾರು ಬಟ್ಟು ಮಾಡಿ ತೋರಿಸುವಂತೆ ಮಾದರಿ ಮಾದರಿ ಸೇವೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಲ್ಲಿ ಹಾನಿಗೊಳಗಾಗಿದೆಯೋ ಹಣ ಬಿಡುಗಡೆಗೆ ತಕ್ಷಣವೇ ಅಪರ ಜಿಲ್ಲಾಧಿಕಾರಿಗಳ ಜೊತೆ ಚಚರ್ಿಸಿ ಕ್ರಮಕೈಗೊಳ್ಳಬೇಕು ಎಂದರು.ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.