ಶ್ರ್ರದ್ಧೆ ಭಕ್ತಿಯಿಂದ ದೇವರ ಸ್ಮರಣೆ ಮಾಡಿ

ಲೋಕದರ್ಶನ ವರದಿ

ಯಲಬುರ್ಗಾ : ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳ ನಿವಾರಣೆಗೆ ಶ್ರದ್ದೇ ಹಾಗೂ ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಅಂದಾಗ ನಿಮ್ಮ ಭಕ್ತಿಗೆ ಬೆಲೆ ಸಿಗುತ್ತದೆ ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಹಿರಿಯ  ಬಸವಲಿಂಗೇಶ್ವರ ಶ್ರೀಗಳ 33ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿಮ್ಮ ದಿನ ನಿತ್ಯದ ಕೆಲಸಗಳ ಮದ್ಯ ಭಕ್ತಿ ಎನ್ನುವದನ್ನ ಹಾಗೂ ಧಾನ ಧರ್ಮವನ್ನು ಮಾಡುವದು ಇತರರಿಗೆ ಒಳಿತನ್ನು ಮಾಡುವದನ್ನ ರೂಡಿಸಿಕೊಳ್ಳಬೇಕು ಕಷ್ಟದಲ್ಲಿರುವವರಿಗೆ ನೀಡುವ ಸಹಾಯವು ತುಂಬಾ ಉತ್ತಮವಾದದ್ದು ನಾಳೆ ನಾವು ಸತ್ತ ಮೇಲೆ ಏನನ್ನು ಕೊಂಡೋಯ್ಯುವದಿಲ್ಲಾ ಆದ್ದರಿಂದ ಇರುವದರೊಳಗೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ಹಾಲಪ್ಪ ಆಚಾರ, ಒಪ್ಪತ್ತೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಗುಳೆದಗುಡ್ಡ, ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಜಿಗೇರಿ, ಸದಾಶಿವಾಚಾರ್ಯ ಮಹಾಸ್ವಾಮೀಗಳು ಗುರಗುಂಟಾ, ಮುಖಂಡರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಅಡವಯ್ಯಜ್ಜ ಕಣ್ಯಾಣಮಠ, ಈಶಪ್ಪ ಸ್ಟಾಂಪಿನ್, ಮಹೇಶ ಹುಬ್ಬಳ್ಳಿ, ಈಶಪ್ಪ ಬನ್ನಿಕೊಪ್ಪ ಆದಪ್ಪ ಗುಳಗುಳಿ, ಆದೇಶ ಹುಬ್ಬಳ್ಳಿ ಶ್ರೀಶೈಲಪ್ಪ ಬನ್ನಿಕೊಪ್ಪ ನಾಗಪ್ಪ ಹಳೆಮನಿ, ಬಸಲಿಂಗಪ್ಪ ಬನ್ನಿಕೊಪ್ಪ,  ಬಸವರಾಜ ಕೊಳ್ಳಿ, ಬಸನಗೌಡ ಪಾಟೀಲ ಸೇರಿದಂತೆ ಅನೇಕರು ಹಾಜರಿದ್ದರು.