ಮಹ್ಮದ್ ಜೈದ್ಗೆ ಸೆಲಬ್ರೆಟಿ ರನ್ನರ್ ಪ್ರಶಸ್ತಿ

ಬ್ಯಾಡಗಿ03: ತಾಲೂಕಿನ ಕಾಗಿನೆಲೆ ಗ್ರಾಮದ ಮಾಜಿ ಸೈನಿಕ ಆಶೀಫ್ ಅಲಿ ಮತ್ತಿಹಳ್ಳಿ ಅವರ ನಾಲ್ಕು ವರ್ಷದ ಪುತ್ರ ಮಹ್ಮದ್ ಜೈದ್ ಮುಂಬೈನ ಕಡಾವಲಿ ಮ್ಯಾರಥಾನ್ ರೇಸಿನಲ್ಲಿ ಭಾಗವಹಿಸಿ ಸೆಲಬ್ರೆಟಿ ರನ್ನರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾನೆ. 

ಮುಂಬೈನ ಠಾಣಾ ಜಿಲ್ಲೆಯ ಕಲ್ಯಾಣ ತಾಲೂಕಿನ ಕಡಾವಲಿಯಲ್ಲಿ ಏವನ್ ಗ್ರೂಪ್ ನಡಗಾಂವ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮ್ಯಾರಥಾನ್ ರೇಸಿನ ಸ್ಪಧರ್ೆಯಲ್ಲಿ ಸೆಲಬ್ರೇಟಿ ರನ್ನರ್ ಆಗಿ ಪ್ರವೇಶ ಪಡೆದಿದ್ದ ಮಹ್ಮದ್ ಜೈದ್ ಕನರ್ಾಟಕದ ಏಕೈಕ ಸ್ಪಧರ್ಿಯಾಗಿ ಭಾಗವಹಿಸಿದ್ದು, ಈ ಸ್ಪಧರ್ೆಯಲ್ಲಿ 5 ಕಿಮೀ ವರೆಗೆ ಓಡುವ ಮೂಲಕ ಎಲ್ಲರ ಮನ ಗೆದ್ದಿದ್ದಾನೆ. 

ಸದರಿ ಬಾಲಕನನ್ನು ಶಿವಸೇನೆಯ ಮುಖಂಡ ಪ್ರಕಾಶ ಪಾಟೀಲ ಅಭಿನಂದಿಸಿ ಪ್ರಶಸ್ತಿಯೊಂದಿಗೆ ಐದು ಸಾವಿರ ರೂಗಳ ನಗದು ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಠಾಣಾ ಜಿಲ್ಲಾ ಪರಿಷತ್ ಅಧ್ಯಕ್ಷೆ ದೀಪಾಲಿ ಪಾಟೀಲ, ಸದಸ್ಯೆ ಸುಷ್ಮಾ ಲೋನಿ, ಶಿವಸೇನೆ ಮುಖಂಡ ವಸಂತ ಲೋನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.