ಮಹಿಪಾಲ್ ಅರ್ಧ ಶತಕ: ಉತ್ತಮ ಮೊತ್ತದತ್ತ ಭಾರತ ರೆಡ್

ಬೆಂಗಳೂರು, ಆ 31      ಮಯಾಂಕ್ ಅರ್ಗ್ವಾಲ್ (90 ರನ್ ) ಹಾಗೂ ಮಹಿಪಾಲ್ ಲೊಮ್ರೊರ್ (40 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ರೆಡ್ ತಂಡ ದುಲೀಪ್ ಟ್ರೋಫಿಯ ಮೂರನೇ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ಗ್ರೀನ್ ವಿರುದ್ಧ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ. 

ಬೆಂಗಳೂರು ಹೊರವಲಯ ಆಲೂರು ಕೆಎಸ್ಸಿಎ ಅಂಗಳದಲ್ಲಿ ಎರಡು ವಿಕೆಟ್ ಕಳೆದುಕೊಂಡು 140 ರನ್ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ರೆಡ್ ತಂಡ ಮೂರನೇ ದಿನದಾಟದ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 84 ಓವರ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು  

230 ರನ್ ದಾಖಲಿಸಿದೆ. ಇನ್ನೂ 210 ರನ್ ಹಿನ್ನಡೆಯಲ್ಲಿದೆ. 

ಶನಿವಾರ ಬೆಳಗ್ಗೆ ಬ್ಯಾಟಿಂಗ್ ಮುಂದುವರಿಸಿದ ಕರುಣ್ ನಾಯರ್ ಹಾಗೂ ಮಹಿಪಾಲ್ ಲೊಮ್ರೊರ್ ಜೋಡಿ ಇಂದು 31 ರನ್ ಗಳೊಂದಿಗೆ ಒಟ್ಟು 74 ರನ್ ಜತೆಯಾಟವಾಡಿತು. ಎರಡನೇ ದಿನ ಅಮೋಘ ಬ್ಯಾಟಿಂಗ್ ಮಾಡಿದ್ದ ಕರುಣ್ ನಾಯರ್ ಮೂರನೇ ದಿನವಾದ ಇಂದು ಕೂಡ ಅದೇ ಬ್ಯಾಟಿಂಗ್ ಲಯ ಮುಂದುವರಿಸಿದರು. 154 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿಯೊಂದಿಗೆ 90 ರನ್ ಗಳಿಸಿದರು. ಇನ್ನೇನು ಶತಕದಂಚಿನಲ್ಲಿ ಮುನ್ನುಗ್ಗುತ್ತಿದ್ದ ಅವರನ್ನು ಅಂಕಿತ್ ರಜಪೂತ್ ಕ್ಲೀನ್ ಬೌಲ್ಡ್ ಮಾಡಿದರು. ನಿನ್ನೆ ಗಾಯಗೊಂಡು ಅಂಗಳ ತೊರೆದಿದ್ದ ಅಭಿಮನ್ಯು ಈಶ್ವರನ್ ಅವರು 22 ರನ್ ಗಳಿಗೆ ಸೀಮಿತರಾದರು. 

ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಮಹಿಪಾಲ್ ಲೊಮ್ರೊರ್ ಗ್ರೀನ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. 162 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿ ತಂಡಕ್ಕೆ ಅರ್ಧ ಶತಕದ ಕಾಣಿಕೆ ನೀಡಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಶ್ರೀಕಾರ್ ಭರತ್ (17 ರನ್) ಇದ್ದಾರೆ. 

ಭಾರತ ಗ್ರೀನ್ ಪರ ಧರ್ಮೇಂದ್ರ ಸಿನ್ಹ್ ಜಡೇಜಾ ಎರಡು ವಿಕೆಟ್ ಪಡೆದಿದ್ದಾರೆ. ಅಂಕಿತ್ ರಜಪೂತ್ ಹಾಗೂ ರಾಹುಲ್ ಚಾಹರ್ ತಲಾ ಒಂದು ವಿಕೆಟ್ ಕಿತ್ತಿದ್ದಾರೆ.  

ಸಂಕ್ಷಿಪ್ತ ಸ್ಕೋರ್ (ಭೋಜನ ವಿರಾಮ) 

ಭಾರತ ಗ್ರೀನ್ 

ಪ್ರಥಮ ಇನಿಂಗ್ಸ್: 440 

ಭಾರತ ರೆಡ್ 

ಪ್ರಥಮ ಇನಿಂಗ್ಸ್: 84 ಓವರ್ಗಳಲ್ಲಿ 230/4 (ಕರುಣ್ ನಾಯರ್ 90, ಮಹಿಪಾಲ್ ಲೊಮ್ರೊರ್ ಅಜೇಯ 61, ಶ್ರೀಕಾರ್ ಭರತ್ ಔಟಾಗದೆ 17; ಧರ್ಮೇಂದ್ರಸಿನ್ಹ್ ಜಡೇಜಾ 80 ಕ್ಕೆ 2, ಅಂಕಿತ್ ರಜಪೂತ್ 58 ಕ್ಕೆ 1 )