ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡಬೇಕು: ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಒತ್ತಾಯ

ಬೆಂಗಳೂರು, ಫೆ. 8:  ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರ ಮಾತನಾಡಿ, ಮಹೇಶ್ ಕುಮಟಹಳ್ಳಿ ಅವರು ಮಾತೃ ಪಕ್ಷದ ಆರೋಪವನ್ನು ಸಹಿಸಿಕೊಂಡು ಬಿಜೆಪಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತು ಪಾಲಿಸದೆ ಅವರನ್ನು ಸಂಪುಟದಂದ ಹೊರಗಿಟ್ಟಿರುವ ಮರ್ಮವೇನು ಎಂದು ಪ್ರಶ್ನಿಸಿದರು.

ನಮ್ಮ ಸಮಾಜವನ್ನು ನಿಕೃಷ್ಟವಾಗಿ ಕಾಣಬೇಡಿ. ನಮ್ಮ ಸಮಾಜದಲ್ಲೂ ಮುಖ್ಯಮಂತ್ರಿಯಾಗುವ ನಾಯಕರಿದ್ದಾರೆ. ಹಾಗಾಗಿ ನಮ್ಮ ಜನಾಂಗದ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಇನ್ನೆರಡು ಸ್ಥಾನವನ್ನು ನಮ್ಮ ಸಮಾಜದವರಿಗೆ ಮೀಸಲಡಬೇಕು ಎಂದು ಮನವಿ ಮಾಡಿದರು.