ಮಹಾವೀರ ಜಯಂತಿ: ಮುಖ್ಯಮಂತ್ರಿ, ಗಣ್ಯರಿಂದ ಶುಭಾಶಯ

ಬೆಂಗಳೂರು, ಏ.6, ಅಹಿಂಸಾ ಪರಮೋ ಧರ್ಮಃ' ಎಂಬ ದಿವ್ಯ ತತ್ವವನ್ನು ಸಾರಿದ ಭಗವಾನ್ ವರ್ಧಮಾನ ಮಹಾವೀರ ಜಯಂತಿಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ.ಅಹಿಂಸಾ ಪರಮೋ ಧರ್ಮಃ" ಎಂಬ ದಿವ್ಯ ತತ್ವವನ್ನು ಸಾರಿದ ಜೈನ  ಧರ್ಮದ 24 ನೇಯ ಹಾಗೂ ಕೊನೆಯ ತೀರ್ಥಂಕರರಾದ ಭಗವಾನ್ ವರ್ಧಮಾನ ಮಹಾವೀರರ ಜಯಂತಿಯಂದು ಅವರ  ಶಾಂತಿ ತತ್ವಗಳಿಗೆ ನಮನಗಳು. ಸರ್ವರಿಗೂ ಮಹಾವೀರ ಜಯಂತಿಯ ಶುಭಾಶಯಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ,  ನಾಡಿನ ಜನತೆಗೆ ಮಹಾವೀರ ಜಯಂತಿ ಶುಭಾಶಯಗಳು. ಅಹಿಂಸೆಯೇ ಸರ್ವಶ್ರೇಷ್ಠ ಧರ್ಮ ಎಂದು ಸಾರಿದ ಭಗವಾನ್ ಮಹಾವೀರರ ತತ್ವಬೋಧನೆಗಳು ಬದುಕಿಗೆ ದಾರಿದೀಪವಾಗಿವೆ ಎಂದು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಟ್ವೀಟ್ ಮಾಡಿ, ಜೈನಧರ್ಮದ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ, "ಅಹಿಂಸಾ ಪರಮೋ ಧರ್ಮಃ’’ ಎಂಬ ಮೂಲ ಮಂತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾಡಿಗೆ ಭಕ್ತಿ,  ಸರಳತೆಯ ಬಗ್ಗೆ ತಿಳಿಸಿಕೊಟ್ಟ ಭಗವಾನ್ ಮಹಾವೀರರ ಜಯಂತಿಯಿಂದು. ನನ್ನ ನುಡಿ ನಮನಗಳು. ನಾಡಿಗೆ ಶುಭವಾಗಲಿ ಎಂದು ತಿಳಿಸಿದ್ದಾರೆ.