ಗಾಂಧೀಜಿ ಅಹಿಂಸೆ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು: ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಕುಲಕರ್ಣಿ

ಕೊಪ್ಪಳ: ಮಹಾತ್ಮ ಗಾಂಧೀಜಿಯವರು ಅಹಿಂಸೆ ಮಂತ್ರದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ  ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಸಂಜೀವ್ ವಿ. ಕುಲಕರ್ಣಿ  ರವರು ಹೇಳಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ "ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ" ಹಾಗೂ ಕಾರಾಗೃಹ ವಿಚಾರಣಾಧೀನ ಬಂಧಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ದೇಶದ ರಾಷ್ಟ್ರಪಿತ ಎಂದೇ ಖ್ಯಾತಿ ಗಳಿಸಿರುವ ಮಹಾತ್ಮ ಗಾಂಧೀಜಿಯವರು ಬ್ರೀಟಿಷರಿಗೆ ಭಾರತವನ್ನು ಬಿಟ್ಟು ತೊಲಗಿ ಎಂಬ ಘೋಷ ವಾಕ್ಯದೊಂದಿಗೆ ಹೋರಾಡಿದರು.  ವಿಶ್ವದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಮಾರ್ಗದಶರ್ಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಜೀವನ ಆದರ್ಶಗಳನ್ನು ಅನುಸರಿಸುವ ಮೂಲಕ ಅವರಿಗೆ ಗೌರವಪೂರ್ವಕ ಸ್ಮರಣಾಂಜಲಿಯನ್ನು ಸಲ್ಲಿಸೋಣ ಎಂದರು. 

ಕೊಪ್ಪಳ ಲಯನ್ಸ್ ಕ್ಲಬ್ನ ವಲಯ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಅನೇಕ ಚಳುವಳಿಗಳನ್ನು  ಆರಂಭಿಸಿ ಜೈಲು ಸೆರೆವಾಸವನ್ನು ಅನುಭವಿಸಿದರು.  ಇವರು ಒಬ್ಬ ಶ್ರೇಷ್ಟ ವಕೀಲರಾಗಿ ಮತ್ತು  ಅಹಿಂಸೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ  ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀನಿವಾಸ, ಸಿಜೆಎಂ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್,  ಜೆಎಂಎಪ್ಸಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ್ ಪಾಟೀಲ, ಜೆಎಂಎಪ್ಸಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮನು ಶಮರ್ಾ, ಸಹಾಯಕ ಸರ್ಕಾರಿ ಅಭಿಯೋಜಕಿ ಸರ್ವಮಂಗಳ, ಲಯನ್ಸ್ ಕ್ಲಬ್ ಅಧ್ಯಕ್ಷ ಶಾಂತಣ್ಣ ಮುದಗಲ್, ಲಯನ್ಸ್ ಕ್ಲಬ್ ನೇತ್ರ ತಜ್ಞೆ  ಡಾ. ದೀಪಾ ಎ.ವಿ, ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಎಂ.ಕೊಟ್ರೇಶ, ಶಿವುಕುಮಾರ ಸೇರಿದಂತೆ ಲಯನ್ಸ್ ಕ್ಲಬ್ನ ಸದಸ್ಯರು ಮತ್ತು ಕಾರಾಗೃಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.