ಮಹಷ್ರಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಬೇಕು

ರಾಣೇಬೆನ್ನೂರು-ಮಾ. 19: ಹಲಗೇರಿ ಗ್ರಾಮದಲ್ಲಿ ಶ್ರೀ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ಹಾಗೂ ವರಸಿದ್ದಿ ವಿನಾಯಕ ಸಮುದಾಯ ಭವನ ನಿಮರ್ಿಸಲು ನಿವೇಶನ ನೀಡಬೇಕು ಎಂದು ಒತ್ತಾಯಿಸಿ, ವಾಲ್ಮೀಕಿ ಸಮಾಜದ ಮುಖಂಡರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

    ಪ್ರತಿಭಟನೆಯ ನೇತೃತ್ವ ವಹಿಸಿದ್ದ  ವಾಲ್ಮೀಕಿ ಸಮಾಜದ ಮುಖಂಡ ಹನುಮಂತಪ್ಪ ಅಮರಾವತಿ ಮಾತನಾಡಿ, ಹಲಗೇರಿ ಗ್ರಾಮದಲ್ಲಿ ಶ್ರೀ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ಹಾಗೂ ವರಸಿದ್ದಿವಿನಾಯಕ ಸಮುದಾಯ ಭವನ ನಿಮರ್ಿಸಲು ನಿವೇಶನಕ್ಕಾಗಿ ಕಳೆದ 8 ವರ್ಷಗಳಿಂದ ಗ್ರಾಪಂ ಕಚೇರಿಗೆ ಅಜರ್ಿ ಸಲ್ಲಸುತ್ತಾ ಬಂದಿದ್ದೇವೆ. ಇದುವರೆಗೆ ನಿವೇಶನ ನೀಡಿಲ್ಲ, ರಾಜ್ಯ ಸಕರ್ಾರದಿಂದ ಅನೇಕ ಬಾರಿ ಸಮುದಾಯ ಭವನ ನಿಮರ್ಿಸಲು ಅನುದಾನ ಬಂದು ವಾಪಸ್ ಹೋಗಿದೆ. ಹಲಗೇರಿ ಗ್ರಾಪಂ ಕಚೇರಿಯವರು ನಿವೇಶನ ನೀಡಿ ಠರಾವು ಮಾಡಿ ಕೊಟ್ಟಿದ್ದಾರೆ. ಉತಾರ ಕೊಡಲು ವಿಳಂಬ ಮಾಡುತ್ತಿದ್ದಾರೆಂದು ದೂರಿದರು. 

     ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಬಸನಗೌಡ ಕೋಟೂರು ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಮಹಷರ್ಿ ವಾಲ್ಮೀಕಿ ಸಮುದಾಯ ಭವನ ಹಾಗೂ ವರಸಿದ್ದಿವಿನಾಯಕ ಸಮುದಾಯ ಭವನ ನಿಮರ್ಿಸಲು ನಿವೇಶನಕ್ಕಾಗಿ ಗ್ರಾಪಂ ವ್ಯಾಪ್ತಿಗೆ ಬರುವ ಆಸ್ತಿಗಳನ್ನು ಸವರ್ೆ ಮಾಡಿ ಗ್ರಾಪಂ ಕಚೇರಿಯಲ್ಲಿ ಸಬೆ ಕರೆದು ನಿವೇಶನ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆನಂತರ ಪ್ರತಭಟನೆ ಹಿಂಪಡೆದರು.   

     ಸಮಾಜದ ಮುಖಂಡ ರವೀಂದ್ರಗೌಡ ಪಾಟೀಲ, ನಿತ್ಯಾನಂತ ಕುಂದಾಪುರ, ಪಾಲಾಕ್ಷಿ ಕಡೇಮನಿ, ಸಂಜೀವ ಕನವಳ್ಳಿ, ಸೋಮಪ್ಪ ಅಮರಾವತಿ, ಚನ್ನಪ್ಪ ಬಿಸಲಳ್ಳಿ, ಚಂದ್ರಪ್ಪ ಹಾರೋಗೊಪ್ಪ, ಶಿವಪ್ಪ ಬೆಳಕೇರಿ, ಲಕ್ಷ್ಮಣ ತಳವಾರ, ಶೇಖಪ್ಪ ಬಾಕರ್ಿ, ರಿಯಾಜ್ ಖಾನ್ ಪಠಾಣ, ರಮೇಶ ಮೂಲಿಮನಿ ಮತ್ತಿತರರು ಇದ್ದರು.