ಮಹಾರಾಷ್ಟ್ರ ಚುನಾವಣೆ: ಪ್ರೊ.ರಮೇಶ್ ಬೊರ್ನಾರೆ ಅತಿ ಹೆಚ್ಚಿನ ಅಂತರದಿಂದ ಜಯ

 ಔರಂಗಾಬಾದ್, ಮಹಾರಾಷ್ಟ್ರ. ಅ.27:   ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವೈಜಾಪುರ ವಿಧಾನಸಭಾ ಕ್ಷೇತ್ರದ ಶಿವಸೇನೆ ಅಭ್ಯರ್ಥಿ ಪ್ರೊ.ರಮೇಶ್ ಬೊರ್ನಾರೆ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಎನ್ಸಿಪಿಯ ಅಭಯ್ ಚಿಕತ್ಗಾಂವ್ಕರ್ ಅವರನ್ನು ಸೋಲಿಸುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಅಂತರದ ಗೆಲುವು ಸಾಧಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪ್ರೊ.ಬೊರ್ನಾರೆ 59,153 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸೇನಾ ಅಭ್ಯರ್ಥಿ ಮತ್ತು ಔರಂಗಾಬಾದ್ ಪಶ್ಚಿಮ ಕ್ಷೇತ್ರದ ಹಾಲಿ ಶಾಸಕ ಸಂಜಯ್ ಶಿರ್ಸಾತ್ ಅವರು ಬೊರ್ನಾರೆ ಅವರ ನಂತರ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದವರು.   ಸಿರ್ಸಾತ್ ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿ ರಾಜು ಶಿಂಧೆ ಅವರನ್ನು 40,445 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮೂರನೇ ಸ್ಥಾನವನ್ನು ಬಿಜೆಪಿ ಅಭ್ಯರ್ಥ ಮತ್ತು ಗಂಗಾಪುರದ ಹಾಲಿ ಶಾಸಕ ಪ್ರಶಾಂತ್ ಬಾಂಬ್ ಗಳಿಸಿದ್ದಾರೆ. ಅವರು ಎನ್ಸಿಪಿಯ ಸಂತೋಷ್ ಮಾನೆ ಅವರನ್ನು 34,971 ಮತಗಳಿಂದ ಸೋಲಿಸಿದ್ದಾರೆ. ಶಿವಸೇನೆ ಟಿಕೆಟ್ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬಂಡಾಯಗಾರ ಅಬ್ದುಲ್ ಸತ್ತಾರ್ 24,381 ಮತಗಳಿಂದ ಸ್ವತಂತ್ರ ಪ್ರಭಾಕರ್ ಪಲೋಡ್ಕರ್ ಅವರನ್ನು ಸೋಲಿಸುವ ಮೂಲಕ ಸಿಲೋಡ್ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಫುಲಂಬ್ರಿ ಕ್ಷೇತ್ರದಿಂದ, ರಾಜ್ಯ ವಿಧಾನಸಭಾ ಸ್ಪೀಕರ್ ಮತ್ತು ಹಾಲಿ ಶಾಸಕ ಹರಿಭಾವು ಬಾಗಡೆ ಅವರು ಕಾಂಗ್ರೆಸ್ ಅಭ್ಯರ್ಥಿ ಕಲ್ಯಾಣ್ ಕೇಲ್ ವಿರುದ್ಧ 15,271 ಮತಗಳಿಂದ ಜಯಗಳಿಸಿದ್ದಾರೆ. ಪೈಥಾನ್ ಕ್ಷೇತ್ರದ ಸೇನಾ ಅಭ್ಯರ್ಥಿ ಸಂದೀಪನ್ ಭೂಮಾರೆ ಅವರು ಎನ್ಸಿಪಿಯ ದತ್ತ ಗೋರ್ಡ್ ಅವರನ್ನು 14,139 ಮತಗಳ ಅಂತರದಿಂದ ಸೋಲಿಸುವ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎಐಎಂಐಎಂ ಅಭ್ಯರ್ಥಿ ಡಾ. ಗಫ್ಫಾರ್ ಖಾದ್ರಿ ವಿರುದ್ಧ 13,900 ಮತಗಳ ಅಂತರದಿಂದ ಗೆಲ್ಲುವು ಮೂಲಕ ರಾಜ್ಯ ಸಚಿವ ಅತುಲ್ ಸಾವೆ  ಔರಂಗಾಬಾದ್ ಪೂರ್ವ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.  ಶಿವಸೇನೆಯ ನಾಯಕ ಪ್ರದೀಪ್ ಜೈಸ್ವಾಲ್ ಔರಂಗಾಬಾದ್ ಕೇಂದ್ರ ಸ್ಥಾನವನ್ನು ಎಐಎಂಐಎಂನ ನಾಸರ್ ಸಿದ್ದೀಖಿ ಅವರಿಂದ 13,600 ಮತಗಳಿಂದ ಗೆದ್ದುಕೊಂಡಿದ್ದಾರೆ. ಕಳೆದ ರಾಜ್ಯ ವಿಧಾನಸಭೆಯಲ್ಲಿ ಸೇನಾ ಅಭ್ಯರ್ಥಿಯಾಗಿ ಆಯ್ಕೆಯಾಗಿ, ಈಗ ಪಕ್ಷೇತರ ಅಭ್ಯಥರ್ಿಯಾಗಿ ಕಣಕ್ಕಿಳಿದಿದ್ದ ಹರ್ಷವರ್ಧನ್ ಜಾಧವ್ ವಿರುದ್ಧ ಶಿವಸೇನೆ ಅಭ್ಯರ್ಥಿ ಉದಯ್ ರಜಪೂತ್ 12,690 ಮತಗಳ ಅಂತರದಿಂದ ಕನ್ನಾಡ್ ಕ್ಷೇತ್ರವನ್ನು ಗೆದ್ದುಕೊಂಡಿದ್ದಾರೆ.