ಮಹಾರಾಷ್ಟ್ರ ಚುನಾವಣೆ: ತಾರಕಕ್ಕೆ ಏರಿದ ಚುನಾವಣಾ ಪ್ರಚಾರದ ಕಾವು

ಮುಂಬೈ,ಅ 10:   ರಾಜ್ಯ ವಿಧಾನಸಭೆಯ ಚುನಾವಣಾ ಪ್ರಚಾರದ ಕಾವು  ದಿನೇ , ದಿನೇ  ಬಿರುಸುಗೊಳ್ಳುತ್ತಿದೆ. ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಶರದ್ ಪವಾರ್  ಸೇರಿದಂತೆ  ರಾಜಕೀಯ ದಿಗ್ಗಜರು ರಾಜ್ಯದ ಅನೇಕ ಕಡೆ ಬಿರುಸಿನ ಪ್ರಚಾರ ನಡೆಸಲಿದ್ದು ಒಟ್ಟಾರೆ ಪ್ರಚಾರ ತಾರಕ್ಕಕೆ ಮುಟ್ಟಿದೆ.   ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ನಾಲ್ಕು ಕಡೆ ಚುನಾವಣಾ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರು ನಾಲ್ಕು  ಕಡೆ, ಎನ್ ಸಿಪಿ  ನಾಯಕ ಶರದ್ ಪವಾರ್ ಮೂರು ಕಡೆಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ದವ ಠಾಕ್ರೆ ಅವರು ರಾಜ್ಯದ ಆರು  ಸ್ಥಳಗಳಲ್ಲಿ  ಚುನಾವಣಾ ಸಭೆಯನ್ನು ಉದ್ಧೇಶಿಸಿ ಪ್ರಚಾರ ಮಾಡಲಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷರು 5 ಕಡೆ ಚುನಾವಣಾ ಪ್ರಚಾರ  ಸಭೆ ನಡೆಸಲಿದ್ದು ಒಟ್ಟಾರೆ ಪ್ರಚಾರದ ಅಬ್ಬರ  ಜೋರಾಗಿದೆ. ಇದೆ 19 ರಂದು ಬಹಿರಂಗ ಚುನಾವಣಾ ಪ್ರಚಾರ  ಕೊನೆಯಾಗಲಿದ್ದು  ಇದೇ  21 ರಂದು  ಮತದಾನ ನಡೆಯಲಿದೆ, 24 ರಂದು ಮತ ಎಣಿಕೆ  ನಡೆದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಲಿದೆ.