ಮಹಾರಾಷ್ಟ್ರ : ಮುಖ್ಯಮಂತ್ರಿ ಹುದ್ದೆ ಮೇಲೆ ಶಿವಸೇನೆ ಕಣ್ಣು

ಮುಂಬೈ, ಅ 24:    ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದಂತೆ ಅಧಿಕಾರಕ್ಕಾಗಿ ಎರಡೂ ಪಕ್ಷಗಳ ನಡುವೆ ಹಗ್ಗ ಜಗ್ಗಾಟ, ಸಂಘರ್ಷ ಕಾಣಿಸಿಕೊಳ್ಳುವ ಸಾಧ್ಯತೆ ಎದುರಾಗಿದೆ. 

ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಈ ಬಾರಿ, ಈ ಹುದ್ದೆಯನ್ನು ಬಿಜೆಪಿಗೆ ಸುಲಭವಾಗಿ ಬಿಟ್ಟುಕೊಡುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಧಿಕಾರ ಹಂಚಿಕೆ ವಿಚಾರದಲ್ಲಿ ಜಟಾಪಟಿ ನಡೆಯುವ ಸಾಧ್ಯತೆಯೂ ಕಂಡು ಬಂದಿದೆ. ಬಿಜೆಪಿ ಹೇಳಿದಂತೆ ನಾವು ಕೇಳಲು ಆಗುವುದಿಲ್ಲ. ಅಧಿಕಾರದಲ್ಲಿ ನಮಗೆ ಸಮಪಾಲು ಬೇಕೇ ಬೇಕು ಎಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಕುಟುಂಬದ ಸದಸ್ಯರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. 

ಮುಂಬೈ ನ ವಲರ್ಿ ಕ್ಷೇತ್ರದಿಂದ ಆದಿತ್ಯ ಠಾಕ್ರೆ ಸ್ಪರ್ಧೆ ಮಾಡಿದ್ದು, ಅವರನ್ನೇ ಶಿವಸೇನಾ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಕೂಗು, ಒತ್ತಡ ಶಿವಸೇನೆಯಲ್ಲಿ ಹೆಚ್ಚಾಗಿದೆ. ಒಟ್ಟಾರೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಗೆಲುವು ಸಾಧಿಸಿದ್ದರೂ ಅಧಿಕಾರ ಹಂಚಿಕೆ ಸುಗಮವಾಗಿ ನಡೆಯುತ್ತದೆ ಎಂಬ ಆಶಾಭಾವನೆ ಸದ್ಯಕ್ಕಂತೂ ಕಾಣುತ್ತಿಲ್ಲ.