ಜಲ್ನಾ, ಜನವರಿ 16 : ಹೊಸದಾಗಿ ತಿದ್ದುಪಡಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಸುಮಾರು 30 ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಸಿಡಿದೆದ್ದು , ಸಾಮೂಹಿಕ ಪ್ರತಿಭಟನೆಗೆ ಸಜ್ಜಾಗಿವೆ.
ಪ್ರತಿಭಟನಾ ಮೆರವಣಿಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ.
ಕೇಂದ್ರದ ಕ್ರಮ ಅಸಂವಿಧಾನಿಕ ಕೃತ್ಯವಾಗಿದ್ದು, ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಿದೆ ಎಂದೂ ಬಹುಜನ ಕ್ರಾಂತಿ ಮೋರ್ಚಾ (ಬಿಕೆಎಂ) ಸದಸ್ಯರೊಬ್ಬರುಆರೋಪಿಸಿದ್ದಾರೆ.
ಜಮಿಯತ್ ಉಲೇಮಾ ಹಿಂದ್ (ಮೆಹಮೂದ್ ಮದನಿ), ತಬ್ಲಿಗಿ ಜಮಾಅತ್, ಜಮಾಅತ್ ಇಸ್ಲಾಮಿಕ್ ಹಿಂದ್, ಅಹ್ಲೆ ಸುನ್ನತ್ ಜಮಾಅತ್, ಹಜರತ್ ಖ್ವಾಜಾ ಗರಿಬ್ನಾವಾಜ್ ಅಕಾಡೆಮಿ, ಮರಾಠ ಸೇವಾ ಸಂಘ, ಲೋಕಮಾಂಗಲ್ ಸಾಮಾಜಿಕ ಸಂಸ್ಥೆ, ಚತ್ರಪತಿ ಲಾಯನ್ , ಭಾರತ್ ಮುಕ್ತಿ ಮೋರ್ಚಾ, ಜಮಿಯತ್ ಉಲೆಮಾ ಹಿಂದ್ (ಅರ್ಷದ್ ಮದನಿ), ರಾಷ್ಟ್ರೀಯ ಮೂಲ ನಿವಾಸಿಗಳ ಸಂಘ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಹಲವು ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ.