ಮುಂಬೈ, ಅ 26: ಮಹರಾಷ್ಟ್ರದಲ್ಲಿ ಮತ್ತೆ ಸರ್ಕಾರ ರಚಿಸಲು ಬಿಜೆಪಿ-ಶಿವಸೇನೆ ಸಜ್ಜಾಗಿದೆ. ಶಿವಸೇನೆಯ ನಂತರ, ಎನ್ಸಿಪಿ ರಾಜ್ಯ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ, ಪ್ರತಿಪಕ್ಷದ ನಾಯಕ ಹುದ್ದೆ ಎನ್ಸಿಪಿಗೆ ದೊರೆಯಲಿದೆ.
ಪ್ರತಿಪಕ್ಷದ ನಾಯಕ ಹುದ್ದೆಗೆ, ಹಲವಾರು ಎನ್ಸಿಪಿ ಶಾಸಕರ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅವರಲ್ಲಿ, ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಧನಂಜಯ್ ಮುಂಡೆ, ಜಿತೇಂದರ್ ಅವದ್ ಮತ್ತು ಜಯಂತ್ ಪಾಟೀಲ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ ಎನ್ನಲಾಗಿದೆ.
ಹೊಸ ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ನಾಯಕನ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.