ಮಹಾರಾಷ್ಟ್ರ: ಒಂದೇ ದಿನದಲ್ಲಿ ಕೊವಿಡ್‍-19ನ ಹೊಸ 118 ಪ್ರಕರಣಗಳು ದೃಢ; ಒಟ್ಟು ಸಂಖ್ಯೆ 3,320ಕ್ಕೆ ಏರಿಕೆ

ಮುಂಬೈ, ಏಪ್ರಿಲ್ 18, ಮಹಾರಾಷ್ಟ್ರದಲ್ಲಿ ಹೊಸದಾಗಿ 118 ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3,320 ಕ್ಕೆ ಏರಿದೆ.
ಅಲ್ಲದೆ, ಒಂದೇ ದಿನದಲ್ಲಿ ಏಳು ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 201ಕ್ಕೆ ಏರಿದೆ ಎಂದು ನವೀಕೃತ ಅಧಿಕೃತ ಪ್ರಕಟಣೆ ತಿಳಿಸಿದೆ.ನಿನ್ನೆ ವರದಿಯಾದ ಸಾವುಗಳ ಪೈಕಿ ಐದು ಸಾವು ಮುಂಬೈನಿಂದ, ಎರಡು ಸಾವು ಪುಣೆಯಿಂದ ವರದಿಯಾಗಿದೆ. ಪರೀಕ್ಷೆಗಾಗಿ 61,740 ಗಂಟಲು ದ್ರವ ಮಾದರಿಗಳನ್ನು ಕಳುಹಿಸಲಾಗಿದ್ದು, ಈ ಪೈಕಿ 56,964 ಮಾದರಿಗಳಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, 3,320 ಮಾದರಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.ರಾಜ್ಯಾದ್ಯಂತ ಇದುವರೆಗೆ ಒಟ್ಟು 331 ಕರೋನ ರೋಗಿಗಳನ್ನು ಗುಣಪಡಿಸಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.ಸದ್ಯ, 74,784 ಜನರನ್ನು ಮನೆ ಸಂಪರ್ಕತಡೆಯಲ್ಲಿರುವಂತೆ ಸೂಚಿಸಲಾಗಿದೆ. ರಾಜ್ಯದ್ಯಂತ 6373 ಜನರನ್ನು ಸಂಪರ್ಕತಡೆಗೆ ವಿವಿಧ ಪ್ರತ್ಯೇಕ ಸ್ಥಳಗಳಲ್ಲಿ ಇರಿಸಲಾಗಿದೆ.ಇತರ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರ ರಾಜ್ಯದಲ್ಲಿ ಸಾವಿನ ಅನುಪಾತ ಹೆಚ್ಚಾಗಿದೆ ಎಂದು ವರದಿ ಹೇಳಿದೆ.3320 ಸೋಂಕಿತ ರೋಗಿಗಳ ಪೈಕಿ, 2,085 ರೋಗಿಗಳು ಮುಂಬೈವೊಂದರಲ್ಲೇ ಇದ್ದಾರೆ. ವಾಣಿಜ್ಯ ನಗರಿಯೆಂದೇ ಖ್ಯಾತವಾಗಿರುವ ಇಲ್ಲಿ 122 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ವರದಿಗಳಂತೆ ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಕಡಿಮೆ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ.