ಲೋಕದರ್ಶನ ವರದಿ
ಮಹಾಲಿಂಗಪೂರ 06: ಯಾರ ಹೊಟ್ಟೆ ಕಡಿಯುತ್ತೋ ಅವರೆ ಅಜವಾನ ತಿನಬೇಕು ಎನ್ನುವ ಹಿರಿಯರ ಅನುಭವದ ಮಾತೋಂದು ಪದೆ ಪದೆ ಕೇಳುತ್ತೇವೆ.
ಮಹಿಳೆಯರು ಕೈ ಮಾಡಿ ತೋರಿಸುತ್ತಿರುವುದು ಎನನ್ನೋ ತೋರಿಸುತ್ತಿದ್ದಾರೆಂದೂ ಅಂದುಕ್ಕೊಳ್ಳಬೇಡಿ, ಹೆಣ್ಣಿಗೆ ಆಗುವ ನೋವು ಹೆಣ್ಣಿಗೆ ಗೊತ್ತು.
ಪಟ್ಟಣದ ಆರೋಗ್ಯ ಸಮುದಾಯಕ್ಕೆ ಹೋಗುವ ದಾರಿಯ ದುಸ್ಥಿತಿಯನ್ನು ಸ್ಥಳೀಯ ಮಹಿಳೆಯರು ತೋರಿಸುತಿದ್ದಾರೆ.
ರೋಗಿಗಳು, ಬಸಿರು ಹೆಂಗಸರು, ಹಡೆದ ಬಾನಂತಿಯರು, ಅಂಗವಿಕಲರು, ಆಪರೇಷನ್ ಗೆ ಒಳಗಾದವರು ಟಮ್-ಟಮ್ ಗಾಡಿ, ಬೈಕ್ ಮುಖಾಂತರ, ಮತ್ತು ಅಟೋರಿಕ್ಷಾಗಳಲ್ಲಿ ಸರಕಾರಿ ದವಾಖಾನೆಗೆ ಈ ದಾರಿಯ ಮೂಲಕ ಹೋಗುತ್ತೇನೆ ಎಂದರೆ ಆಗುವ ನರಕಯಾತನೆ ಶತ್ರುವಿಗೂ ಬೇಡ ಎನ್ನುತ್ತಾರೆ ಮಹಿಳೆಯರು.
ಈ ರಸ್ತೆಯು ಕೆಟ್ಟು ಹೋಗಿ ಹಲವು ವರ್ಷಗಳೆ ಕಳೆದಿವೆ. ದುರುಸ್ಥಿ ಭಾಗ್ಯ ಮಾತ್ರ ಬಡ ಜನರ ಪಾಲಿಗೆ ಮರಿಕೆಯಾಗಿದೆ.ಬೇಗನೆ ದುರುಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಪ್ರಭು ಮಲಾಬಾದಿ ಹಾಗೂ ಕುಮಾರ್ ಮಾಂಗ ಆಗ್ರಹಿಸಿದ್ದಾರೆ.