ಮುಂಡಗೋಡ ಪಟ್ಟಣದಲ್ಲಿ ಭಕ್ತಿ ಭಾವದ ಮಹಾ ಶಿವರಾತ್ರಿ
ಮುಂಡಗೋಡ 27 : ಪಟ್ಟಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಬುಧವಾರ ಹಾಗೂ ಗುರುವಾರ ತಾಲೂಕಿನಾದ್ಯಂತ ಶಿವನ ದೇವಾಲಯಗಳಿಗೆ ತಂಡೋಪತಂಡವಾಗಿ ಬಂದು ವಿಶೇಷ ಪೂಜೆ ಸಲ್ಲಿಸಿದರು. ಪಟ್ಟಣದ ಆನಂದ ನಗರದ ಈಶ್ವರ ದೇವಾಲಯ, ಬಂಕಾಪುರ ರಸ್ತೆಯಲ್ಲಿರವ ಪಾರ್ವತಿ ಪರಮೇಶ್ವರ, ಹಳೂರಿನ ಮತ್ತು ಕಿಲ್ಲೆ ಓಣಿಯ ಈಶ್ವರ, ಸೇರಿದಂತೆ ಮಾಲೆಗಳನ್ನು ಹಾಕಿ, ನೈವೇದ್ಯ ಅರ್ಿಸಿ ಪೂಜೆಯಲ್ಲಿ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾದರು. ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಆನಂದ ನಗರ ಪ್ಲಾಟನಲ್ಲಿ ಈಶ್ವರ ದೇವಸ್ಥಾನದಲ್ಲಿ ಬುಧವಾರ ಮತ್ತು ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಫೆ. 26 ಬುಧವಾರ ಬೆಳಿಗ್ಗೆ ಈಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಲಘು ರುದ್ರಾಭಿಷೇಕ, ಮಹಾಮಂಗಳಾರತಿ ಮತ್ತು ಹಣ್ಣು ಕಾಯಿ ಸಮರೆ್ಣ ಮತ್ತು ಸಂಜೆ ಮಹಾಪೂಜೆ ದೀಪಾಲಂಕಾರ, ಹಾಗೂ ರಾತ್ರಿ 9 ಗಂಟೆಗೆ ಜಾಗರಣೆ ನಿಮಿತ್ತ ಶ್ರೀ ಮಾತೆ ಬಸವೇಶ್ವರಿ ಅತ್ತಿವೇರಿಧಾಮ ಮುಂಡಗೋಡ ಇವರಿಂದ ಪ್ರವಚನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಫೆ.27ರಂದು ಗುರುವಾರ ಬೆಳಿಗ್ಗೆ ಪುಣ್ಯಾಂಕವಾಚನ, ನವಗ್ರಹ, ವಾಸ್ತುಮುಖ, ಲಘುರುದ್ರ ಹೋಮ ಮಧ್ಯಾಹ್ನ ವಿಶೇಷ ಪುಷ್ಪಾಲಂಕಾರ ಪೂಜೆ ಹಾಗೂ ಅನ್ನಸಂತರೆ್ಣ ಜರುಗಲಿದೆ. ಈಶ್ವರ ದೇವಾಲಯದ ಹೋಗುವ ಮಾರ್ಗದಲ್ಲಿ ಕೇಸರಿ ಬಾವುಟಗಳಿಂದ ಸಿಂಗರಿಸಲಾಗಿದೆ.