ಚೆನ್ನೈ, ಮಧುರೈನ ಮಹಾತ್ಮ ಮಾಂಟೆಸ್ಸರಿ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಜೆ ಧನ್ಯಾ ಥಸ್ನೆಮ್, ಅಮೆರಿಕಾದಲ್ಲಿರುವ ನಾಸಾಗೆ ಅಕ್ಟೋಬರ್ ಮೊದಲ ವಾರ ಭೇಟಿ ನೀಡಲಿದ್ದು, ಅಲ್ಲಿನ ಗಗನಯಾತ್ರಿಗಳೊಂದಿಗೆ ಸಂವಹನ ನಡೆಸಲಿದ್ದಾರೆ.
ಅಮೆರಿಕಾ ಮೂಲದ ಗೋ 4 ಗುರು, ಆನ್ಲೈನ್ ವಿಜ್ಞಾನ ಮತ್ತು ಶೈಕ್ಷಣಿಕ ಪ್ರವಾಸ ಸೇವೆಗಳ
ಕಂಪನಿಯು ವಿಜ್ಞಾನ ಸಾಮಥ್ರ್ಯ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಆನ್ಲೈನ್ ಮೂಲಕ ಆಯೋಜಿಸಿತ್ತು. 2019ರ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಸ್ಪರ್ದೆಯ (ಎನ್ಎಸ್ಎಸ್ಸಿ) ಮೂವರು ವಿಜೇತರಲ್ಲಿ ಥಸ್ನೆಮ್ ಕೂಡ ಒಬ್ಬರಾಗಿದ್ದಾರೆ.
ನಾಸಾ ಪ್ರವಾಸದಲ್ಲಿ ಪಾಲ್ಗೊಳ್ಳುವ ಇತರ ಇಬ್ಬರು ಭಾರತೀಯ ವಿದ್ಯಾರ್ಥಿಗಳಲ್ಲಿ, ಭಾಷ್ಯಮ್ ಗ್ರೂಪ್ ಆಫ್ ಸ್ಕೂಲ್ಸ್ ನ ಸಾಯಿ ಪೂಜಿತಾ, ಐಐಟಿ ಫೌಂಡೇಶನ್ ಸ್ಕೂಲ್, ಆಂಧ್ರಪ್ರದೇಶದ ಗುಂಟೂರು ಮತ್ತು ಮಹಾರಾಷ್ಟ್ರದ ಅಲಿಬಾಗ್ನ ಜಿಂದಾಲ್ ವಿದ್ಯಾ ಮಂದಿರದ ಅಭಿಷೇಕ್ ಶರ್ಮಾ ಸೇರಿದ್ದಾರೆ.
ಎಂ.ಎಸ್ ಧನ್ಯಾ ಅವರು ಸ್ಪರ್ದೆಯಲ್ಲಿ 'ಡಾ ಎಪಿಜೆ ಅಬ್ದುಲ್ ಕಲಾಂ-ಮೈ ಹೀರೋ' ಬಗ್ಗೆ ಬರೆದಿದ್ದರು. ನಾನು
ಅಮೆರಿಕಾದ ಈ ಪ್ರವಾಸದಲ್ಲಿ ಪ್ರಾಯೋಗಿಕವಾಗಿ ಎಲ್ಲವನ್ನೂ ಕಲಿಯಲು ಎದುರು ನೋಡುತ್ತಿದ್ದೇನೆ, ಎಂದು ಹೇಳಿದ್ದಾರೆ.
2019 ರ ಎನ್ಎಸ್ಎಸ್ಸಿ ವಿಜೇತರು ಗೋ 4 ಗುರುಗಳ ಅಂತರರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಸ್ಪರ್ದೆಯಲ್ಲಿ ಭಾಗವಹಿಸಲಿದ್ದು, ಐವರು ವಿಜೇತರಿಗೆ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಕೋರ್ಸ್ಗ್ಳಿಗಾಗಿ ಹತ್ತು ಸಾವಿರ ಡಾಲರ್ ವಿದ್ಯಾರ್ಥಿವೇತನವನ್ನು ನೀಡಲಿದೆ.
ಡಾ.ಡಾನ್ ಥಾಮಸ್ ಅವರು ಮುಂದಿನ ಎರಡು ವಾರಗಳಲ್ಲಿ ದಕ್ಷಿಣ ವಿರುಧುನಗರ ಜಿಲ್ಲೆಯ ಅರುಪ್ಪುಕೋಟೈ ವಿದ್ಯಾರ್ಥಿಗಳು ಸೇರಿದಂತೆ ತಮಿಳುನಾಡಿನಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ.