ಮಾಂಜರಿ 02: ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಪ್ರಯತ್ನದಲ್ಲಿ ಅಂಕಲಿ ಗ್ರಾಮದಲ್ಲಿ ನಬಾರ್ಡ ಯೋಜನೆಯಡಿ 1.70 ಕೋಟಿ ರೂ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮಂಜೂರಾಗಿದೆ. ಆದರೆ ಸಂಸದರು, ಶಾಸಕರು ನಮ್ಮ ಪ್ರಯತ್ನದಿಂದ ಆರೋಗ್ಯ ಕೇಂದ್ರ ಕಟ್ಟಡ ನಿಮರ್ಾಣವಾಗಲು ಅನುದಾನ ಮಂಜೂರಾಗಿದೆಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಅಂಕಲಿ ಗ್ರಾಮದ ಬಿಜೆಪಿ ಮುಖಂಡ ತುಕಾರಾಮ ಪಾಟೀಲ ಆರೋಪಿಸಿದರು.
ಶನಿವಾರ ಅಂಕಲಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಐದು ತಿಂಗಳ ಹಿಂದೆಯಷ್ಠೇ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ರಾಜ್ಯಸಭೆ ಸದಸ್ಯ ಕೋರೆ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಾವಸ್ಥೆ ಇರುವುದನ್ನು ಕಂಡು ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ನಬಾರ್ಡ ಯೋಜನೆಯಡಿ ಕಟ್ಟಡ ನಿಮರ್ಾಣಕ್ಕೆ ಅನುದಾನ ಮಂಜೂರು ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ್ದರು. ಅದೇ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಸಕರ್ಾರ 1.70 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದೆ ಎಂದರು.
ಸ್ಥಳೀಯ ಶಾಸಕರು, ಸಂಸದರು ಕೈಗೊಂಡ ಅಭಿವೃದ್ಧಿ ಕಾರ್ಯದಲ್ಲಿ ನಾವು ಯಾವುದೇ ರೀತಿ ರಾಜಕಾರಣ ಮಾಡಿಲ್ಲ, ಆದರೆ ನಮ್ಮ ನಾಯಕರು ಮಂಜೂರು ಮಾಡಿಸಿಕೊಂಡು ಬಂದ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ನಾವೇ ಮಂಜೂರು ಪಡೆಯಲು ಕಾರಣಿಭೂತರಾಗಿದ್ದೇವೆಂದು ಗ್ರಾಮದಲ್ಲಿ ಪ್ಲೇಕ್ಸ್ ಮತ್ತು ಪತ್ರಿಕೆಯಲ್ಲಿ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದರು.
ಕಳೆದ ಐದು ವರ್ಷದ ತಮ್ಮ ಅಧಿಕಾರ ಅವಧಿಯಲ್ಲಿ ಕೋರೆ ಅವರು ಅಂಕಲಿ ಮತ್ತು ಸಿದ್ದಾಪೂರವಾಡಿ ಗ್ರಾಮದಲ್ಲಿ ಸಮಾರು 3 ಕೋಟಿ ರೂ ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗಡಿ ಗ್ರಾಮದ ಅಭಿವೃದ್ಧಿಗೆ ಶ್ರಮೀಸಿದ್ದಾರೆ. ಮುಸ್ಲಿಂ ಸಮಾಜ ರುದ್ರಭೂಮಿಯ ಕಂಪೌಂಡ ನಿಮರ್ಾಕ್ಕೆ 10 ಲಕ್ಷ ರೂ, ಗ್ರಾಮದ ವಿವಿಧ ಸ್ಥಳಗಳಲ್ಲಿ 5 ಹೈ ಮ್ಯಾಕ್ಸ್ ದೀಪ ಅಳವಡಿಕೆಗೆ 5 ಲಕ್ಷ ರೂ, ಶೌಚಾಲಯ ನಿಮರ್ಾಣಕ್ಕೆ 17 ಲಕ್ಷ ರೂ, ಲಕ್ಷ್ಮೀ ನಗರದ ಸಮುದಾಯ ಭವನ, ಸಿಸಿ ರಸ್ತೆ, ಚರಂಡಿ ನಿಮರ್ಾಣಕ್ಕೆ 15 ಲಕ್ಷ ರೂ, ಸಾರ್ವಜನಿಕ ಗ್ರಂಥಾಲಯ ನಿಮರ್ಾಣಕ್ಕೆ 10 ಲಕ್ಷ ರೂ, ಗ್ರಾಮದ ಸಿಸಿ ರಸ್ತೆ ನಿಮರ್ಾಣಕ್ಕೆ 45 ಲಕ್ಷ ರೂ, ಸಿದ್ಧಾಪೂರವಾಡಿ ಗ್ರಾಮದಲ್ಲಿ ರಸ್ತೆ ನಿಮರ್ಾಣಕ್ಕೆ 20 ಲಕ್ಷ ರೂ, ಕೋರೆ ನಗರದಲ್ಲಿ 350 ಆಶ್ರಯ ಮನೆಗಳ ಸ್ಥಳದಲ್ಲಿಯೇ ಡಾಂಬರೀಕರಣ ರಸ್ತೆ ನಿಮರ್ಾಣಕ್ಕೆ 40 ಲಕ್ಷ ರೂ, ಬಸವಪ್ರಭು ಕೋರೆ ಕಾಲೋನಿಯಲ್ಲಿ ರಸ್ತೆ ನಿಮರ್ಾಣಕ್ಕೆ 61 ಲಕ್ಷ ರೂ ಸೇರಿ 3 ಕೋಟಿಕ್ಕಿಂತ ಹೆಚ್ಚಿನ ಅನುದಾನ ಮಂಜೂರು ಮಾಡಿಸಿಕೊಂಡು ಗ್ರಾಮದ ಅಭಿವೃಧ್ಧಿಗೆ ಪಣ ತೋಟ್ಟಿದ್ದಾರೆ ಎಂದರು.
ಅಜೀತ ಉಮರಾಣಿ, ಪೀಂಟು ಹಿರೇಕುರುಬರ, ಪ್ರಭಾಕರ ಶಿಂಧೆ, ರಾಜು ಕಾಂಬಳೆ, ಮನೋಹರ ಚೌವ್ಹಾನ, ವಿವೇಕ ಕಮತೆ ಮುಂತಾದವರು ಇದ್ದರು.