ಪ್ರತಿಭೆಗಳು ಸಮಾಜಕ್ಕಾಗಿ ಶ್ರಮಿಸಿದರೆ ಸನ್ಮಾನಿಸಿದ್ದು ಸಾರ್ಥಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅಭಿಮತ

ರಾಮದುರ್ಗದಲ್ಲಿ ಬಣಜಿಗ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ನೂತನ ಶಾಸಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿ


ರಾಮದುರ್ಗ 01: ಪ್ರತಿಭಾವಂತ ವಿದ್ಯಾಥರ್ಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ನಾಗರಿಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರೆ ಸನ್ಮಾನಿಸಿದ್ದು ಸಾರ್ಥಕವಾಗುತ್ತದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಮಂಗಳವಾರ ಮರಾಠಾ ಮಂಗಲ ಕಾಯರ್ಾಲಯದಲ್ಲಿ ಕನರ್ಾಟಕ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಏರ್ಪಡಿಸಿದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ನೂತನ ಶಾಸಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಋಣ ತೀರಿಸಲು ಕೈಲಾದ ಮಟ್ಟಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.

ಲಿಂಗಾಯತ ಒಳ ಪಂಗಡಗಳು ಸೇರಿದಂತೆ ಕ್ಷೇತ್ರದ ಎಲ್ಲರೊಂದಿಗೆ ವಿಶ್ವಾಸದಿಂದ ಇರುವ ಪರಿಣಾಮ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ಎಂದು ನುಡಿದ ಅವರು ವೀರಶೈವ ಲಿಂಗಾಯತ ಸಮಾಜದ ಜನರು ನಿವೇಶನ ನೀಡಿದರೆ ಶಾಸಕರ ಅನುದಾನ ಮತ್ತು ವಿಶೇಷ ಅನುದಾನದ ಮೂಲಕ ಸಮುದಾಯ ಭವನ ನಿಮರ್ಾಣಕ್ಕೆ ಪ್ರಾಮಾಣಿಕ ಪ್ರಯತ್ನ  ಮಾಡುವುದಾಗಿ ಹೇಳಿದರು.

ಸಮಾಜದ ರಾಜ್ಯಾಧ್ಯಕ್ಷ ಡಾ. ಶಿವಬಸಪ್ಪ ಹೆಸರೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಭಾ ಪುರಸ್ಕಾರ ವಿದ್ಯಾಥರ್ಿ ಜೀವನದ ಮಹತ್ವದ ಅಂಗವಾಗಿದ್ದು ಉತ್ತಮ ಸಂಸ್ಕಾರ ಪಡೆದು ಸಮಾಜಕ್ಕೆ ಮಾದರಿಯಾಗುವಂತಹ ಜೀವನ ನಡೆಸಬೇಕು ಎಂದು ಹೇಳಿದರು. ಬಣಜಿಗ ಸಮಾಜದ ಸಂಘಟನೆ ಮತ್ತೊಂದ ಸಮಾಜದೊಂದಿಗೆ ಸಂಘರ್ಷಕ್ಕಲ್ಲ. ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಎಂದು ಹೇಳಿದರು.

ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಜಗಜಂಪಿ ಮಾತನಾಡಿ ವಿದ್ಯೆ ಶಿಕ್ಷಕರಿಂದ ದೊರೆಯುತ್ತದೆ ಬುದ್ದಿ ಜನ್ಮದಿಂದ ಮತ್ತು ಮನೆಯ ಸಂಸ್ಕಾರದಿಂದ ಬರುತ್ತದೆ ಹಿರಿಯರೆಲ್ಲ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಒಳ್ಳೇಯ ಪ್ರಜೆಗಳನ್ನು ನಿಮರ್ಾಣ ಮಾಡಬೇಕು ಸಲಹೆ ನೀಡಿದರು.

ಬಣಜಿಗ ಬಂಧು ಮಾಸ ಪತ್ರಿಕೆ ಸಂಪಾದಕ ರುದ್ರಣ್ಣ ಹೊಸಕೇರಿ ಮಾತನಾಡಿ ಪ್ರತಿಭಾ ಪುರಸ್ಕಾರ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ನೀಡುವ ಪುರಸ್ಕಾರವಾಗಿದ್ದು ಕಾರಣಾಂತರಗಳಿಂದ ಪರೀಕ್ಷೆಯಲ್ಲಿ ಪಾಸಾಗದ ವಿದ್ಯಾಥರ್ಿಗಳಿಗೆ ಪೂರಕ ಪರೀಕ್ಷೆಯಲ್ಲಿ ಪಾಸಾಗುವಂತೆ ತರಬೇತಿ ನೀಡಿ ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೇರವು ನೀಡಬೇಕೆಂದು  ತಾಲೂಕ ಘಟಕದ ಪದಾಧಿಕಾರಿಗಳಿಗೆ ಕಿವಿ ಮಾತಹೇಳಿದರು.

ಅಂತರಾಷ್ಟ್ರೀಯ ಗಾಯಕ ಡಾ. ಮೃತ್ಯುಂಜಯ ಶೆಟ್ಟರ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು.

50ಕ್ಕೂ ಹೆಚ್ಚು ವಿದ್ಯಾಥರ್ಿಗಳನ್ನು ಮತ್ತು ರಾಜ್ಯ ಸಮಿತಿಯ ವಿಶ್ವಸ್ಥ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.

ಕಟಕೋಳದ ಸಚ್ಚಿದಾನಂದ ಮಹಾಸ್ವಾಮಿಗಳ ಸಾನಿಧ್ಯವಹಿಒಸಿದ್ದರು. ಬಣಜಿಗ ಕ್ಷೇಮಾಭಿವೃದ್ದಿ ತಾಲೂಕ ಘಟಕದ ಅಧ್ಯಕ್ಷ ಸತೀಶ ಎಸ್ ಜಿನಗಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಷಣ್ಮುಖಪ್ಪ ನಾಗನೂರ, ಇಳಕಲದ ಶಿವರಾಜ ಅಕ್ಕಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯದಶರ್ಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಪ್ರೋ. ಎಸ್. ಎಂ. ಸಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ. ಬಿ. ದೂಪದ ನಿರೂಪಿಸಿ ವಂದಿಸಿದರು.