ಸಿಂದಗಿ೦೯: ಇತ್ತೀಚಿಗೆ ಯಂಕಂಚಿ ಗ್ರಾಮದ ಜಮೀನೊಂದರಲ್ಲಿ ವಿದ್ಯುತ್ ಅಳವಡಿಸುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಲುಗಿ ಸಾವನ್ನಪ್ಪಿದ ಪುರದಾಳ ಗ್ರಾಮದ ಬಸವರಾಜ ಬಿರಾದಾರ ಅವರ ಮನೆಗೆ ಶಾಸಕ ಎಂ. ಸಿ. ಮನಗೂಳಿ ಅವರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವೈಯಕ್ತಿಕವಾಗಿ ರೂ. 50 ಸಾವಿರಗಳನ್ನು ಸಹಾಯಧನ ನೀಡಿ ಮತ್ತೆ ಸರಕಾರದ ಸವಲತ್ತು ಕೊಡಿಸುವ ಭರವಸೆ ನೀಡಿದರು.
ನಂತರ ಶಾಸಕ ಎಂ. ಸಿ. ಮನಗೂಳಿ ಮಾತನಾಡಿ, ಇಡೀ ದೇಶಕ್ಕೆ ಮಾಹಾಮಾರಿ ಕೊರೋನಾ ಆವರಿಸಿ ಮನುಷ್ಯನ ಮುಖ ಮನುಷ್ಯನೇ ನೋಡದಂತ ಕಾಲ ಬಂದು ಬಿಟ್ಟಿದೆ. ಸುಮಾರು ಎರಡು ತಿಂಗಳೀನಿಂದ ಕೆಲವು ಸಭೆಗಳನ್ನು ಹೊರತು ಪಡಿಸಿ ಮನೆಯಲ್ಲಿಯೇ ಇರುವಂತಾಗಿದೆ. ನಮ್ಮ ಮಗ ಅಶೋಕ ಮನಗೂಳಿಯವರು ತಾಲೂಕಿನಲ್ಲಿರುವ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಸ್ಪಂದಿಸುತ್ತಿದ್ದಾರೆ.
ಮನುಷ್ಯನಿಗೆ ಎಷ್ಟು ದಿನಗಳ ಆಯುಷ್ಯ ಕೊಟ್ಟಿರುತ್ತಾನೋ ಹಾಗೆ ಸಾವು ಹೇಗೆ ಬರುತ್ತದೆ ಎಂಬುದು ಆ ದೇವರು ಮೊದಲೇ ನಿರ್ಧರಿಸುತ್ತಾನೆ. ಈ ಎಲ್ಲ ಅವಘಡಗಳು ನೆಪಕ್ಕೆ ಮಾತ್ರ. ಅವನ ಆಯುಷ್ಯ ಅಷ್ಟೆ ಇತ್ತು ಅಂತ ತಿಳಿದು ಅದೇ ಚಿಂತೆಯಿಂದ ಮೇಲೆದ್ದು ಮುಂದಿನ ಕಾರ್ಯದ ಕಡೆಗೆ ಹೋಗಬೇಕು ಎಂದು ನೊಂದ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ವೀರಭದ್ರ ಶಾಬಾದಿ ಬ್ಯಾಕೋಡ, ಶಿವಣ್ಣ ಕೊಟಾರಗಸ್ತಿ, ದಾವಲಸಾಬ ಮದರಖಾನ ಪುರದಾಳ, ವಿಶ್ವನಾಥ ಹಗಟಗಿ ಸೇರಿದಂತೆ ಹಲವರಿದ್ದರು.